ವೀರಾಜಪೇಟೆ, ಏ. 4: ಜೆಡಿಎಸ್. ಪಕ್ಷದ ನಗರ ಸಮಿತಿಯ ಉಪಾಧ್ಯಕ್ಷರಾಗಿ ಫಾಹೀಮ್ ಅಹಮ್ಮದ್, ಕಾರ್ಯದರ್ಶಿಯಾಗಿ ರಂಜನ್ ನಾಯ್ಡು, ಸಹ ಕಾರ್ಯದರ್ಶಿಯಾಗಿ ಎಂ.ಸಿ. ಮಹೇಶ್, ಸಂಚಾಲಕರಾಗಿ ಪಿ. ನಿತಿನ್, ಸಹ ಸಂಚಾಲಕರಾಗಿ ಮಹಮ್ಮದ್ ಅಯೂಬ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಎಂ.ಎಂ. ಮುನ್ನಾ ಇವರುಗಳನ್ನು ಪಕ್ಷದ ವರಿಷ್ಠರ ಸಲಹೆಯಂತೆ ನೇಮಕ ಮಾಡಿರುವದಾಗಿ ಪಿ.ಎ. ಮಂಜುನಾಥ್ ತಿಳಿಸಿದ್ದಾರೆ.