ಮಡಿಕೇರಿ, ಏ. 4: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ಏಪ್ರಿಲ್ ತಿಂಗಳಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.

ಲ್ಯಾಪ್ರ್ರೇಸ್ಕೋಪಿಕ್: ತಾ. 7 ರಂದು ಸಿದ್ದಾಪುರ ಮತ್ತು ಪಾಲಿಬೆಟ್ಟ ಆರೋಗ್ಯ ಕೇಂದ್ರ, ತಾ.9 ರಂದು ಕುಟ್ಟ ಸರ್ಕಾರಿ ಆರೋಗ್ಯ ಕೇಂದ್ರ, ತಾ. 23 ರಂದು ಗೋಣಿಕೊಪ್ಪ ಸ.ಆ.ಕೇಂದ್ರ, ತಾ. 25 ರಂದು ನಾಪೋಕ್ಲು ಸರ್ಕಾರಿ ಆರೋಗ್ಯ ಕೇಂದ್ರ, ತಾ. 11 ರಂದು ಕುಶಾಲನಗರ ಸ.ಆ.ಕೇಂದ್ರ, ತಾ. 21 ರಂದು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಶಸ್ತ್ರ ಚಿಕಿತ್ಸೆಯನ್ನು ಡಾ.ನವೀನ್ ಅವರು ನೆರವೇರಿಸಲಿದ್ದಾರೆ.

ಟ್ಯುಬೆಕ್ಟಮಿ: ತಾ. 13 ರಂದು ಸುಂಟಿಕೊಪ್ಪ ಪ್ರಾ.ಆ.ಕೇಂದ್ರ, ತಾ. 17 ರಂದು ಪ್ರಾ.ಆ.ಕೇಂದ್ರ ಮಾದಾಪುರ ಮತ್ತು ಚೆಟ್ಟಳ್ಳಿ, ತಾ. 20 ರಂದು ಪ್ರಾ.ಆ.ಕೇಂದ್ರ ಕೊಡ್ಲಿಪೇಟೆ, ತಾ. 24 ರಂದು ಪ್ರಾ.ಆ.ಕೇಂದ್ರ ಹೆಬ್ಬಾಲೆ, ಹಾಗೂ ತಾ. 27 ರಂದು ಸ.ಆ.ಕೇಂದ್ರ ಸಿದ್ದಾಪುರ ಮತ್ತು ಪಾಲಿಬೆಟ್ಟದಲ್ಲಿ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಸರ್ಜನ್ ಡಾ.ಎಂ.ವಿ.ಚೇತನ್ ಆರೋಗ್ಯ ಶಿಬಿರ ನಡೆಸಲಿದ್ದಾರೆ.