ಕರ್ನಾಟಕ ಸರ್ಕಾರ ಈ ಹಿಂದಿನ ಪಂದ್ಯಾವಳಿಗೆ ರೂ.5 ಲಕ್ಷ ಅನುದಾನ ನೀಡಿದ್ದು, ಈ ಬಾರಿ ಚುನಾವಣೆ ನಂತರ ಅನುದಾನ ಬಿಡುಗಡೆಗೊಳ್ಳುವ ಆಶಾಭಾವ ವ್ಯಕ್ತಪಡಿಸಿದರು.ಪುತ್ತಾಮನೆ ಕುಟುಂಬದ ದಿ.ಮುದ್ದಮಯ್ಯ ಅವರು ಕೊಡಗು ಸಿ ರಾಜ್ಯವಾಗಿದ್ದಾಗ ವಿಧಾನ ಪರಿಷತ್ ಸದಸ್ಯರು ಹಾಗೂ ಎಂ.ಎಲ್.ಎ. ಆಗಿದ್ದರು. ಪೆÇನ್ನಂಪೇಟೆಯ ರಸ್ತೆಯೊಂದಕ್ಕೆ ಪುತ್ತಾಮನೆ ಮುದ್ದಮಯ್ಯ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಪೆÇನ್ನಂಪೇಟೆ ಸರ್ಕಾರಿ ಶಾಲೆಗೆ ಸುಮಾರು 3.80 ಎಕರೆ ಜಾಗವನ್ನು ಮುದ್ದಮಯ್ಯ ಉದಾರವಾಗಿ ನೀಡಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ವಿನೋಬಾಜಿ ಅವರು ಮತ್ತೂರುವಿಗೆ ಭೇಟಿ ನೀಡಿದ ಸಂದರ್ಭ ಹರಿಜನ ಕಾಲೋನಿಗೆ 0.50 ಎಕರೆ ನಿವೇಶನ ಹಾಗು ಪೆÇನ್ನಂಪೇಟೆ ಸಾಯಿ ಶಂಕರ ಟ್ರಸ್ಟ್‍ಗೆ 3.50 ಎಕರೆ ಜಾಗವನ್ನು ದಾನವಾಗಿ ನೀಡಿರುವದಾಗಿ ಮಾಹಿತಿ ನೀಡಿದರು.

ಅಮ್ಮಕೊಡವ ಸಮುದಾಯದಲ್ಲಿ ಸುಮಾರು 10 ಕುಟುಂಬಗಳು ಸಣ್ಣ ಸಣ್ಣ ಕುಟುಂಬಗಳಾಗಿದ್ದು ಇದರ ಸದಸ್ಯರು ಹಾಗೂ ಪುತ್ತಾಮನೆ ಕುಟುಂಬ ತಂಡಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಿರುವದಾಗಿ ಪುತ್ತಾಮನೆ ಕುಟುಂಬ ಸಂಘದ ಪಿ.ಜಿ.ಪ್ರಸಾದ್ ಅವರು ಮಾಹಿತಿ ನೀಡಿದರು.

ಒಟ್ಟು ಜಿಲ್ಲೆಯಲ್ಲಿ 6000ಕ್ಕೂ ಅಧಿಕ ಅಮ್ಮಕೊಡವ ಜನಾಂಗವಿದ್ದು, 36 ಮನೆತನವಿದೆ ಎಂದು ಕಾವೇರಿ ಮಹಿಳಾ ಸಂಘದ ಅಧ್ಯಕ್ಷೆ ಅಮ್ಮತ್ತೀರ ರೇವತಿ ಪರಮೇಶ್ವರ್ ವಿವರಿಸಿದರು.

ಪುತ್ತಾಮನೆ ಕಪ್ ಕ್ರಿಕೆಟ್ ಹಬ್ಬದ ದ್ವಿತೀಯ ಪೂರ್ವಭಾವಿ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಪುತ್ತಾಮನೆ ಕುಟುಂಬದ ಉಪಾಧ್ಯಕ್ಷ ಪಿ.ಎಂ.ಶ್ರೀನಿವಾಸ್, ಕಾರ್ಯದರ್ಶಿ ಪಿ.ಡಿ.ಜೀವನ್, ಪುತ್ತಾಮನೆ ಸುಕುಮಾರ್, ಜಗದೀಶ್, ಅಶೋಕ್, ಅನಿತಾ ಜೀವನ್, ಜೀವನ್, ಸುಧೀಶ, ಆಕಾಶ್, ಸ್ಮರಣ್, ಮಾಯಮುಡಿ ಕಂಗಳತ್ತನಾಡು ಸಂಘದ ಬಲ್ಯಂಡ ದಿನು, ಸಮಾಜದ ನಿರ್ದೇಶಕ ಅಮ್ಮತ್ತೀರ ರಾಜೇಶ್, ಕಾವೇರಿ ಮಹಿಳಾ ಸಂಘದ ಗೌರವ ಕಾರ್ಯದರ್ಶಿ ಮನ್ನಕ್ಕಮನೆ ಅಶ್ವಿನಿ ನಂದಾ ಮುಂತಾದವರು ಉಪಸ್ಥಿತರಿದ್ದರು.

- ವರದಿ: ಟಿ.ಎಲ್.ಶ್ರೀನಿವಾಸ್