ಸಿದ್ದಾಪುರ, ಏ. 3: ಗೋದಾಮಿನಲ್ಲಿಟ್ಟಿದ್ದ ಹಳೆಯ ಗೀಸರ್ ಹಂಡೆಗಳನ್ನು ಕಳವು ಮಾಡಿದ ಆರೋಪದಡಿಯಲ್ಲಿ ನಾಲ್ವರನ್ನು ಬಂಧಿಸಿದ್ದು, ಓರ್ವನನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.ಕಳ್ಳತನ ಮಾಡಿದ ಆರೋಪಿಗಳು ಟಾಟಾ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುವ ಹೆಚ್.ಎನ್. ನಾಗರಾಜ್, ವಿ.ಕೆ. ತ್ಯಾಗರಾಜ್, ಹೆಚ್. ನಾಗರಾಜ್, ವೀನು, ವಸಂತ ಎಂದು ಪ್ರಕರಣ ದಾಖಲಾಗಿದ್ದು, ಹಳೆಯ ಗೀಸರ್‍ನ ತಾಮ್ರದ ಹಂಡೆಗಳನ್ನು ಕಳ್ಳತನ ಮಾಡಿದ ಆರೋಪಿಗಳು ಕಾಫಿ ತೋಟದ ಬಳಿಯ ಮೋರಿಯೊಂದರ ಕೆಳಗೆ ಅವಿತು ಬಚ್ಚಿಟ್ಟಿರುವದಾಗಿ ತನಿಖೆಯಿಂದ ತಿಳಿದು ಬಂದಿದೆ.