ಸೋಮವಾರಪೇಟೆ, ಏ. 3: ನೇಣು ಬಿಗಿದುಕೊಂಡು ಅವಿವಾಹಿತ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಹಾನಗಲ್ಲು ಗ್ರಾಮದಲ್ಲಿರುವ ಎಂ.ಆರ್. ನಂದಕುಮಾರ್ ಅವರ ಲೈನ್ಮನೆಯಲ್ಲಿ ವಾಸವಿರುವ ಕಿಟ್ಟ ಎಂಬವರ ಪುತ್ರ, ಲೋಡರ್ಸ್ ಕೆಲಸ ಮಾಡುತ್ತಿದ್ದ ಲೋಕೇಶ್ (24) ಎಂಬಾತನೇ ನೇಣಿಗೆ ಶರಣಾದವನಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅತಿಯಾದ ಮದ್ಯಪಾನಿಯಾಗಿದ್ದ ಲೋಕೇಶ್ ನಿನ್ನೆ ರಾತ್ರಿ ಲೈನ್ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹಾನಗಲ್ಲು ಬಾಣೆಯ ಹಿಂದೂರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.