ಗೋಣಿಕೊಪ್ಪ, ಏ. 3: ಮಾಯಮುಡಿ ವಿಎಸ್‍ಎಸ್‍ಎನ್ ಬ್ಯಾಂಕ್ ಉದ್ಯೋಗಿ ಎಂ.ಎ. ನಂದನು ಅವರ ವಿರುದ್ದ ಹಣ ದುರುಪಯೋಗದ ಆರೋಪದ ವಿಚಾರಣೆ ನಡೆಸಿದ ಪೊನ್ನಂಪೇಟೆ ಜೆಎಂಎಫ್‍ಸಿ ನ್ಯಾಯಾಲಯ ನಂದನು ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ನಂದನು 1998ನೇ ಸಾಲಿನಲ್ಲಿ ಪ್ರಬಾರ ಕಾರ್ಯದರ್ಶಿ ಹಾಗೂ ನಗದು ಗುಮಾಸ್ತರಾಗಿ ಕಾರ್ಯ ನಿರ್ವಸುತ್ತಿದ್ದ ಸಂದರ್ಭ ರೂ. 1,40 ಲಕ್ಷ ಹಣ ದುರುಪಯೋಗ ಮಾಡಿದ್ದರು ಎಂದು ಆರೋಪಿಸಿ ಬ್ಯಾಂಕ್ ಅಧ್ಯಕ್ಷರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಂತೆ ವಿಚಾರಣೆ ನಡೆಸಿದ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾದೀಶ ಎಂ.ಇ. ಮೋಹನ್ ಗೌಡ ದೋಷಮುಕ್ತ ಎಂದು ತೀರ್ಪು ನೀಡಿದ್ದಾರೆ. ನಂದನು ಪರ ಬಿ.ಆರ್. ಶೆಟ್ಟಿ ವಾದ ಮಂಡಿಸಿದ್ದಾರೆ.