ಮಡಿಕೇರಿ, ಏ. 2: ಸಿ.ವಿ. ಶಂಕರ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಲೆದರ್‍ಬಾಲ್ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ತಾ. 6ರಿಂದ 25ರವರೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. ಇದೇ ಪ್ರಥಮ ಬಾರಿಗೆ ಬಾಲಕಿಯರಿಗೂ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ಆಸಕ್ತಿ ಇರುವವರು ತಾ. 6ರಂದು ಮಧ್ಯಾಹ್ನ 3 ಗಂಟೆಗೆ ಮೈದಾನದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ 9980060322 ಅನ್ನು ಸಂಪರ್ಕಿಸುವಂತೆ ವಾಂಡರರ್ಸ್ ಕ್ಲಬ್‍ನ ರಘು ಮಾದಪ್ಪ ತಿಳಿಸಿದ್ದಾರೆ.