ಸೋಮವಾರಪೇಟೆ,ಮಾ.31: ಸೋಮವಾರಪೇಟೆಯಿಂದ ಕೊಡ್ಲಿಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಬೆಂಗಳೂರಿನಿಂದ ಅಬ್ಬಿಫಾಲ್ಸ್‍ಗೆ ತೆರಳುತ್ತಿದ್ದ ಕಾರಿನ ನಡುವೆ ಕಾಗಡಿಕಟ್ಟೆ ಗ್ರಾಮದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಬೆಂಗಳೂರಿನಿಂದ ಅಬ್ಬಿಫಾಲ್ಸ್‍ಗೆ ತೆರಳುತ್ತಿದ್ದ ಮಿಲನ್ ಮತ್ತು ಗೆಳೆಯರಿದ್ದ ಕಾರು, ಕಾಗಡಿಕಟ್ಟೆ ಗ್ರಾಮದ ಇಳಿಜಾರಿನಲ್ಲಿ ಎದುರು ಭಾಗದಿಂದ ಆಗಮಿಸಿದ ಬಸ್‍ಗೆ ಡಿಕ್ಕಿಯಾಗಿದೆ. ಎದುರಿನಲ್ಲಿದ್ದ ಕಾರನ್ನು ಓವರ್‍ಟೇಕ್ ಮಾಡುವ ಸಂದರ್ಭ ಅವಘಡ ಸಂಭವಿಸಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.