ಮಡಿಕೇರಿ, ಮಾ. 31: ಕೋತೂರು ಗ್ರಾಮದ ಶ್ರೀ ಮಾದೇಶ್ವರ ದೇವರ ವಾರ್ಷಿಕ ಉತ್ಸವವು ಏ. 2 ರಂದು ನಡೆಯಲಿದೆ. ದೇವರ ಉತ್ಸವವು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತದೊಂದಿಗೆ ಪ್ರಾರಂಭವಾಗಿ 7ಕ್ಕೆ ಕೊಂಡಕ್ಕೆ ಬೆಂಕಿ ಸ್ಪರ್ಶ, 9 ಗಂಟೆಗೆ ಮಾದೇಶ್ವರ ದೇವರನ್ನು ಹುಲಿಯ ವಾಹನದಲ್ಲಿ ಲಕ್ಷ್ಮಣ ತೀರ್ಥ ನದಿಯಲ್ಲಿ ಜಳಕಕ್ಕೆ ಕೊಂಡೊಯ್ಯುವದು, 10 ಗಂಟೆಗೆ ಲಕ್ಷ್ಮಣತೀರ್ಥ ನದಿಯಿಂದ ದೇವರ ಜಳಕ ಮುಗಿಸಿ ದೇವರ ಸನ್ನಿದಿಯಲ್ಲಿ ಭಕ್ತರು ಕೊಂಡ ಹಾಯುವದು, 11 ಗಂಟೆಗೆ ರುದ್ರಾಭಿಷೇಕ ಪೂಜೆ, 12 ಗಂಟೆಗೆ ಮಹಾ ಪೂಜೆ, 1 ಗಂಟೆಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.