*ಗೋಣಿಕೊಪ್ಪಲು, ಮಾ. 31: ಅಮ್ಮತ್ತಿ ಶ್ರೀ ನಿತ್ಯ ಚೈತನ್ಯ ಮಡಪುರ ಶ್ರೀ ಮುತ್ತಪ್ಪ ದೇವಸ್ಥಾನದ 44ನೇ ವರ್ಷದ ಮುತ್ತಪ್ಪ ತೆರೆ ಮಹೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ಕೊಡಿಮರ ನೆಡುವ ಮೂಲಕ ಚಾಲನೆ ನೀಡಲಾಯಿತು.

ಗಣಪತಿ ಹೋಮ, ಧ್ವಜಾರೋಹಣ, ಮುತ್ತಪ್ಪ ಮಲೆ ಇಳಿಯುವದು, ದೀಪಾರಾಧನೆ, ಮುತ್ತಪ್ಪನ ವೆಳ್ಳಾಟಂ, ಶಾಸ್ತಪ್ಪನ ವೆಳ್ಳಾಟಂ, ಕಂಡಕರ್ಣನ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ ನಡೆದವು. ತಾ. 1 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಪೆÇಟ್ಟನ್ ತೆರೆ, 10 ಗಂಟೆಗೆ ವಸುರಿ ಮಲೆ ತೆರೆ, ಮಧ್ಯಾಹ್ನ 12 ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ, ಸದಸ್ಯ ಲಿಜೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.