ಮಡಿಕೇರಿ, ಮಾ. 31: ದೇಶ ರಕ್ಷಣೆಯೊಂದಿಗೆ ವಿಶ್ವಮಟ್ಟದ ಸೇನಾನಿಗಳಾಗಿ ಭಾರತೀಯ ಸೈನ್ಯಕ್ಕೆ ಸ್ಫೂರ್ತಿಯಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯರಂತಹ ಮಹನೀಯರನ್ನು ಮಾತೃಭೂಮಿಗೆ ಕೊಡುಗೆ ನೀಡಿರುವ ಹೆಮ್ಮೆಯ ನೆಲ ಕೊಡಗು ಎಂದು ನೌಕಾದಳದ ವೈಸ್ ಅಡ್ಮಿರಲ್ ಎ.ಆರ್. ಕರ್ವೆ ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾತೃಭೂಮಿಗೆ ಕೊಡುಗೆ ನೀಡಿರುವ ಹೆಮ್ಮೆಯ ನೆಲ ಕೊಡಗು ಎಂದು ನೌಕಾದಳದ ವೈಸ್ ಅಡ್ಮಿರಲ್ ಎ.ಆರ್. ಕರ್ವೆ ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನರಲ್ ತಿಮ್ಮಯ್ಯ ಅವರಿಗೆ ಸೇನಾ ಕ್ಷೇತ್ರದಲ್ಲಿ ಇದ್ದ ಕರ್ತವ್ಯ ನಿಷ್ಠೆ, ಗೌರವ, ಧೈರ್ಯ ಮತ್ತು ದೇಶಪ್ರೇಮ ಯುವ ಜನರಿಗೆ ಮಾದರಿ. ಆ ನಿಟ್ಟಿನಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವಂತಾಗಬೇಕು ಎಂದು ವೈಸ್ ಅಡ್ಮಿರಲ್ ಎ.ಆರ್.ಕರ್ವೆ ಕರೆ ನೀಡಿದರು. ಜನರಲ್ ತಿಮ್ಮಯ್ಯ ಅವರು ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸುವದರ ಜೊತೆಗೆ, ಉತ್ತಮ ರಾಜನೀತಿಯನ್ನು ಹೊಂದಿದ್ದರು. ವಿದೇಶಗಳಲ್ಲಿ ಉತ್ತಮ ರಾಜತಾಂತ್ರಿಕರಾಗಿ

(ಮೊದಲ ಪುಟದಿಂದ) ಸೇವೆ ಸಲ್ಲಿಸಿ, ಉತ್ತಮ ಹೆಸರು ಪಡೆದಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ 112ನೇ ಜಯಂತಿ ಸಂದರ್ಭ ಈ ಸೇನಾನಿಯ ನಿವಾಸ ಸನ್ನಿಸೈಡ್ ಆವರಣದಲ್ಲಿ ನೂತನ ಯುದ್ಧ ಸ್ಮಾರಕ ಲೋಕಾರ್ಪಣೆಗೊಳಿಸಿ, ತಿಮ್ಮಯ್ಯ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಅತೀವ ಆನಂದ ತಂದಿದೆ ಎಂದ ಕರ್ವೆ ಅವರು, ಕೊಡಗಿನ ವೀರ ಸೇನಾನಿಗಳನ್ನು ನಾಡಿಗೆ ಸೀಮಿತವಾಗಿ ಪರಿಗಣಿಸದೆ ಈ ರಾಷ್ಟ್ರದ ಶ್ರೇಷ್ಠತಮರಲ್ಲಿ ಗಮನಿಸುವಂತೆ ತಿಳಿ ಹೇಳಿದರು.

ಜನರಲ್ ತಿಮ್ಮಯ್ಯ ಓರ್ವ ಸೇನೆಯ ನಾಯಕರು ಮಾತ್ರವಲ್ಲದೆ, ಯುದ್ಧ ಕಲೆ, ಕ್ರೀಡಾ ಸ್ಫೂರ್ತಿ, ವಿಶ್ವಶಾಂತಿಧೂತರಾಗಿ ಎಲ್ಲ ಕಾಲಕ್ಕೂ ದೂರದೃಷ್ಠಿ ಹೊಂದಿದ್ದ ಅವಿಸ್ಮರಣೀಯ ವ್ಯಕ್ತಿತ್ವದಿಂದ ಕೂಡಿದ್ದರು ಎಂದು ಅವರು ನೆನಪಿಸಿದರು. ಭಾರತದ ರಕ್ಷಣೆಗೆ ಅತ್ಯಂತ ಕಷ್ಟಕಾಲದಲ್ಲಿ ಅದ್ವಿತೀಯ ಕೊಡುಗೆ ನೀಡಿದ ಮಹಾನ್ ಸೇನಾನಿ ಎಂದು ಅವರು ಬೊಟ್ಟು ಮಾಡಿದರು.

ಕೊಡಗಿನ ನೆಲದ ಯೋಧ ಪರಂಪರೆಯ ಧೈರ್ಯ, ಸಾಹಸ, ಮಾತೃಭೂಮಿಗೆ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಸ್ಮರಿಸಿಕೊಂಡ ಕರ್ವೆ ಅವರು, ಇಂತಹ ನೆಲದಲ್ಲಿ ನಾಡಿನ ಹುತಾತ್ಮರ ಸ್ಮರಣೆಯೊಂದಿಗೆ ಯುದ್ಧ ಸ್ಮಾರಕದ ಮುಖಾಂತರ ನಮನ ಸಲ್ಲಿಸಲು ಹೆಮ್ಮೆಪಡುವದಾಗಿ ಮುಕ್ತ ಕಂಠದಿಂದ ಶ್ಲಾಘಿಸಿದರು. ಸೈನ್ಯಾಧಿಕಾರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ ಸ್ವಾಗತ ನುಡಿಯೊಂದಿಗೆ, ಯುದ್ಧ ಸ್ಮಾರಕದ ಹಿನ್ನೆಲೆ ನೆನಪಿಸಿದರು. ಫೀ.ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ ಪ್ರಾಸ್ತಾವಿಕ ನುಡಿಯೊಂದಿಗೆ, ಮೇಜರ್ (ನಿ) ಬಿ.ಎ. ನಂಜಪ್ಪ ವೀರ ಸೇನಾನಿಯ ಯಶೋಗಾಥೆಯನ್ನು ಪರಿಚಯಿಸಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ನಿವೃತ್ತ ಸೈನ್ಯಾಧಿ ಕಾರಿಗಳಾದ ಮೇಜರ್ ಜನರಲ್ ಎಸ್.ಕೆ. ಕಾರ್ಯಪ್ಪ, ಲೆಫ್ಟಿನೆಂಟ್ ಜನರಲ್ ಸಿ.ಎನ್. ಸೋಮಣ್ಣ, ಮೇಜರ್ ಜನರಲ್ ಕೆ.ಪಿ. ನಂಜಪ್ಪ, ಮೇಜರ್ ಜನರಲ್ ಎಸ್.ಕೆ. ಕಾರ್ಯಪ್ಪ, ಬ್ರಿಗೇಡಿಯರ್ ಸಾಂಗ್ವಾ, ಬಿ.ಎ. ಕಾರ್ಯಪ್ಪ, ಕೆ.ಸಿ. ಸುಬ್ಬಯ್ಯ, ಸೈನ್ಯಾಧಿಕಾರಿ ಸುನಿಲ್ ಜೋಸ್, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಆರ್.ಆರ್. ಲಾಲ್, ನಿರ್ಮಿತಿ ಕೇಂದ್ರದ ಸಚಿನ್, ಸೇರಿದಂತೆ ಅನೇಕ ನಿವೃತ್ತ ಸೈನ್ಯಾಧಿಕಾರಿಗಳು, ಕುಟುಂಬ ಸದಸ್ಯರು, ವಿವಿಧ ರಂಗದ ಗಣ್ಯರು ಪಾಲ್ಗೊಂಡಿದ್ದರು.

ಬೆಂಗಳೂರು ಎಂ.ಇ.ಜಿ. ತಂಡ ಮೂರು ಸುತ್ತು ಕುಶಾಲತೋಪು ಗಳನ್ನು ಸಿಡಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವದರೊಂದಿಗೆ ಸಾರೇ ಜಹಾಂಸೇ ಅಚ್ಛ... ಸುಶ್ರಾವ್ಯ ಗಾಯನವನ್ನು ವಾದ್ಯಗೋಷ್ಠಿ ಮೂಲಕ ನುಡಿಸಿದರು. ಮುಕ್ಕೋಡ್ಲು ವಿನ ತಂಡದ ಬೊಳಕಾಟ್, ಕತ್ತಿಯಾಟ್, ಬೆಕ್ಕೆಸೊಡ್ಲೂರು ಮಹಿಳಾ ಬಳಗದ ಉಮ್ಮತ್ತಾಟ್ ಈ ವೇಳೆ ಎಲ್ಲರ ಗಮನ ಸೆಳೆಯಿತು. ನಿವೃತ್ತ ಮೇಜರ್ ಬಿ.ಎ. ನಂಜಪ್ಪ ನಿರೂಪಿಸಿ, ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು. ಎಂ.ಇ.ಜಿ ತಂಡದ ವಾದ್ಯಗೋಷ್ಠಿಯೊಂದಿಗೆ ರಾಷ್ಟ್ರ ಗೀತೆಯೂ ಮೊಳಗಿತು. ಮಣಜೂರು ಮಂಜುನಾಥ್ ವಂದಿಸಿದರು.