ಗೋಣಿಕೊಪ್ಪಲು, ಮಾ. 31: ನಾಪೆÇೀಕ್ಲು ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ತಾ. 8 ರಿಂದ 10 ರವರೆಗೆ ಅಷ್ಟಬಂಧ ಬೃಹ್ಮಕಲಶೋತ್ಸವ ಹಾಗೂ 14 ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿರುವದಾಗಿ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಅಷ್ಟಬಂಧ ಬೃಹ್ಮಕಲಶೋತ್ಸವ ವೇದಬೃಹ್ಮ ಶ್ರೀ ವೇದವ್ಯಾಸ ತಂತ್ರಿ ಮತ್ತು ಶ್ರೀ ಶಂಕರನಾರಾಯಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ತಾ. 8 ರಿಂದ ವಿವಿಧ ಪೂಜಾ ಕಾರ್ಯಕ್ರಮ, ಪ್ರಸಾದ ವಿತರಣೆ, ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ತಾ. 10 ರಂದು ಬೆಳಿಗ್ಗೆ 5.30 ರಿಂದ ದೇವರ ದರ್ಶನ, ವಿಶೇಷ ಸೇವೆಗಳು, ಮಹಾಪೂಜೆ, ಸಂಜೆ 5.30ಕ್ಕೆ ಶ್ರೀ ದೇವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಗಳೊಂದಿಗೆ ನಾಪೆÇೀಕ್ಲು ಪೇಟೆ ಮುಖ್ಯ ಬೀದಿಯಲ್ಲಿ ಮೆರವಣಿಗೆ, ಕಾವೇರಿ ನದಿಯಲ್ಲಿ ತೀರ್ಥಸ್ನಾನ ಮಾಡಿ ದೇವಾಲಯಕ್ಕೆ ಹಿಂತಿರುಗುವದು, ದೇವರ ನೃತ್ಯ, ವಸಂತಪೂಜೆ ಹಾಗೂ ಪ್ರಸಾದ ವಿನಿಯೋಗದೊಂದಿಗೆ ವಾರ್ಷಿಕ ಉತ್ಸವ ಮುಕ್ತಾಯಗೊಳ್ಳಲಿದೆ.