ಮಡಿಕೇರಿ, ಮಾ. 30: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಶಿವಮೊಗ್ಗದಿಂದ ಕೇರಳದ ಕ್ಯಾಲಿಕಟ್ಗೆ ಸೂಕ್ತ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ಘಟನೆಯೊಂದನ್ನು ಆನೆಚೌಕೂರು ತಪಾಸಣಾ ಗೇಟ್ನಲ್ಲಿ ಭೇದಿಸಲಾಗಿದೆ. ಕೇರಳ ಮೂಲದ ಸುನಿಲ್ ಎಂಬ ವ್ಯಕ್ತಿ ತನ್ನ ಕಾರಿನಲ್ಲಿ (ಕೆ.ಎಲ್.-56- ಎಂ-2304) ನಗದು ರೂ. 1.23 ಲಕ್ಷವನ್ನು ಸಾಗಿಸುತ್ತಿದ್ದ ಬಗ್ಗೆ ಇಂದು ಮಧ್ಯಾಹ್ನ ತಪಾಸಣೆ ವೇಳೆ ದೃಢಪಟ್ಟಿದೆ.ಸಂಬಂಧಿಸಿದವರಿಗೆ ಸೂಕ್ತ ಮಾಹಿತಿ ನೀಡದ ಕಾರಣ ತಹಶೀಲ್ದಾರ್ ಗೋವಿಂದರಾಜ್ ನಿರ್ದೇಶನದಂತೆ, ಸೆಕ್ಟರ್ ಮ್ಯಾಜಿಸ್ಟ್ರೇಟ್ ತೀರ್ಥ ಅವರು ನೀಡಿದ ಪುಕಾರು ಮೇರೆಗೆ ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ ಹಾಗೂ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ.