ಗುಡ್ಡೆಹೊಸೂರು ಮಾ. 29: ಇಲ್ಲಿಗೆ ಸಮೀಪದ ಆನೆಕಾಡು ನಿವಾಸಿ ಅನೇಕ ವರ್ಷಗಳಿಂದ ಆನೆ ಮಾವುತರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಮಣಿ (55) ಅವರು ಕಳೆದ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರಿಗೆ ಇತ್ತೀಚೆಗೆ ಆನೆ ಜಮೇದಾರ ಆನೆಕಾಡು ವಿಭಾಗದ ಎಲ್ಲಾ ಆನೆಗಳ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು.

ಅನೇಕ ವರ್ಷಗಳಿಂದ ಮೈಸೂರಿನಲ್ಲಿ ನಡೆಯುವ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೃತರ ಮನೆಗೆ ಈ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಅರುಣ್, ಸಹಾಯಕ ಅರಣ್ಯಾಧಿಕಾರಿ ರಂಜನ್ ಮತ್ತು ಇಲಾಖಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.