ಸೋಮವಾರಪೇಟೆ,ಮಾ.29: ತಾಲೂಕಿನ ಪುಷ್ಪಗಿರಿ ವನ್ಯಧಾಮ ದೊಳಗೆ ಅಕ್ರಮ ಪ್ರವೇಶ ಮಾಡಿ, ಒಂದು ಕಡವೆ, ಮುಳ್ಳುಹಂದಿ ಸೇರಿದಂತೆ ಒಂದು ಮಂಗನನ್ನೂ ಬೇಟೆಯಾಡಿದ 6 ಮಂದಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ಹಾಗೂ ಪುಷ್ಪಗಿರಿ ವನ್ಯಧಾಮದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ನಿನ್ನೆ ರಾತ್ರಿ ಅರಣ್ಯದೊಳಗೆ ನುಗ್ಗಿದ ತಾಲೂಕಿನ ಕುಂಬಾರಗಡಿಗೆ ಗ್ರಾಮದ ನಿವಾಸಿಗಳಾದ ಟಿ.ಪಿ. ಮುದ್ದಯ್ಯ, ರಾಮಪ್ಪ ಅವರ ಪುತ್ರ ಸೋಮಯ್ಯ, ಕುಶಾಲಪ್ಪ ಅವರ ಪುತ್ರ ಗಣೇಶ್, ಮುದ್ದಯ್ಯ ಅವರ ಪುತ್ರ ಲೋಕೇಶ್, ಮುಟ್ಲು ಗ್ರಾಮದ ಕಾರ್ಯಪ್ಪ ಅವರ ಪುತ್ರ ವಿ.ಕೆ. ಮನು, ಗ್ರಾಮದ ನಿವಾಸಿಗಳಾದ ಟಿ.ಪಿ. ಮುದ್ದಯ್ಯ, ರಾಮಪ್ಪ ಅವರ ಪುತ್ರ ಸೋಮಯ್ಯ, ಕುಶಾಲಪ್ಪ ಅವರ ಪುತ್ರ ಗಣೇಶ್, ಮುದ್ದಯ್ಯ ಅವರ ಪುತ್ರ ಲೋಕೇಶ್, ಮುಟ್ಲು ಗ್ರಾಮದ ಕಾರ್ಯಪ್ಪ ಅವರ ಪುತ್ರ ವಿ.ಕೆ. ಮನು, (ಮೊದಲ ಪುಟದಿಂದ) ಕುಳಿತಿದ್ದಾರೆ. ಇಂದು ಬೆಳಗ್ಗೆ ಬೇಟೆಯಾಡಿದ ವನ್ಯಪ್ರಾಣಿಗಳನ್ನು ಮಾಂಸಗಳಾಗಿ ಮಾಡಿ ಹಿಂತಿರುಗುತ್ತಿದ್ದ ಸಂದರ್ಭ ಸುತ್ತುವರೆದ ಅರಣ್ಯ ಇಲಾಖಾ ಸಿಬ್ಬಂದಿಗಳು 6 ಮಂದಿಯನ್ನು ಬಂಧಿಸಿದ್ದಾರೆ. ಈ ಸಂದರ್ಭ ಲೋಕೇಶ್ ಎಂಬಾತ ಅರಣ್ಯದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ.

ತಡ್ಡಿಕೊಪ್ಪ ಗ್ರಾಮವನ್ನು ಒಳಗೊಂಡಂತೆ ಕುಂಬಾರಗಡಿಗೆ, ಮುಟ್ಲು ಭಾಗಕ್ಕೂ ವಿಸ್ತರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಭಕ್ತಿಬೆಟ್ಟ ಪ್ರದೇಶದಲ್ಲಿ ಮಾಂಸವನ್ನು ಕತ್ತರಿಸಿ ಸಾಗಾಟಗೊಳಿಸುತ್ತಿದ್ದ ಬೇಟೆಗಾರರನ್ನು ಬಂಧಿಸಲಾಗಿದ್ದು, ಅವರಿಂದ 40 ಕೆ.ಜಿ. ತೂಕದ ಕಡವೆ ಮಾಂಸ, ಕತ್ತರಿಸಲು ಸಿದ್ಧವಾಗಿರುವ ಮುಳ್ಳುಹಂದಿ, ಮಂಗದ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ಇದರೊಂದಿಗೆ 3 ಕೋವಿ, ಸಜೀವ ಗುಂಡುಗಳು, 6 ಮೊಬೈಲ್, ಬ್ಯಾಟರಿ ಟಾರ್ಚ್‍ಗಳು, ವಿವಿಧ ಮಾದರಿಯ 9 ಕತ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓಗಳೊಂದಿಗೆ ಡಿಆರ್‍ಎಫ್‍ಓ ದುಷ್ಯಂತ್, ಅರಣ್ಯ ಇಲಾಖೆಯ ವೀಕ್ಷಕ ಶ್ರೀಕಾಂತ್, ಜಗದೀಶ್, ವನ್ಯಧಾಮ ವಿಭಾಗದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.