ನಾಪೆÇೀಕ್ಲು, ಮಾ. 29: ಕುಂಜಿಲ ಗ್ರಾಮದ ಅಮ್ಮಂಗೇರಿ ಶ್ರೀ ಪುದಿಯೋದಿ ದೈವದ ವಾರ್ಷಿಕ ಉತ್ಸವ ತಾ. 30 ಮತ್ತು 31 ರಂದು ನಡೆಯಲಿದೆ. ತಾ. 30 ರಂದು ರಾತ್ರಿ ಭೀರ, ಭೀರಾಳಿ, ಭದ್ರಕಾಳಿ ದೈವದ ಕೋಲ ನಡೆದರೆ, ತಾ. 31 ರ ಮುಂಜಾನೆ ಪುದಿಯೋದಿ ದೈವದ ಕೋಲ ನಡೆಯಲಿದೆ ಎಂದು ಬಾಚಮಂಡ, ಕೋಲೆಯಂಡ ಕುಟುಂಬಸ್ಥರು ಮತ್ತು ಆಡಳಿತ ಮಂಡಳಿ ತಿಳಿಸಿದೆ.