ನಾಪೆÇೀಕ್ಲು, ಮಾ. 29: ನಾಪೆÇೀಕ್ಲು ಆಟೋ ಫ್ರೆಂಡ್ಸ್ ವತಿಯಿಂದ ನಾಪೆÇೀಕ್ಲು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಮೊದಲನೆ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಸಿದ್ದಾಪುರ ಸಿಟಿ ಬಾಯ್ಸ್ ತಂಡ ಪ್ರಥಮ ಸ್ಥಾನ, ಮಡಿಕೇರಿ ಸಾಮ್ರಾಟ್ ರೈ ಬ್ರದರ್ಸ್ ತಂಡ ದ್ವಿತೀಯ ಬಹುಮಾನದೊಂದಿಗೆ ನಗದು ಹಾಗೂ ಟ್ರೋಫಿಯನ್ನು ಪಡೆದರು. ಸಮಾರಂಭದ ಅಧ್ಯಕ್ಷತೆಯನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ವಹಿಸಿದ್ದರು.

ವೇದಿಕೆಯಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಖುರೇಷಿ, ಡಿ.ಐ. ಮಹಮ್ಮದ್, ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ವಕೀಲ ಪವನ್ ಪೆಮ್ಮಯ್ಯ, ಪ್ರವೀಣ್ ರೈ, ಕಲಿಯಂಡ ಕೌಶಿಕ್ ಕುಶಾಲಪ್ಪ, ಸಜನ್ ಪೂಜಾರಿ, ಮೂವೇರ ವಿನು ಪೂಣಚ್ಚ, ಮತ್ತಿತರರು ಇದ್ದರು. ಸಿ.ಎಂ.ಉಸ್ಮಾನ್ ಸ್ವಾಗತಿಸಿ, ವಂದಿಸಿದರು.