ಶನಿವಾರಸಂತೆ, ಮಾ. 28: ಉತ್ತಮ ವ್ಯಕ್ತಿತ್ವ ಹಾಗೂ ಸಂಸ್ಕಾರ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಹಾಸನದ ಗೃಹ ವಿಜ್ಞಾನ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಕಾರ ಹಾಗೂ ವ್ಯಕ್ತಿತ್ವ ಕರೀದಿಸಲಾಗದ ಸಂಪತ್ತಾಗಿದ್ದು, ಇದರಿಂದ ವ್ಯಕ್ತಿ ದೊಡ್ಡ ಮನುಷ್ಯನೆನಿಸುತ್ತಾನೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಸಾಧಿಸಲೇ ಬೇಕೆಂಬ ಛಲ, ಗುರಿ ಹೊಂದಿದರೇ ಮಾತ್ರ ಯಶಸ್ಸು ಕಾಣಬಹುದು ಎಂದು ಕೃಷ್ಣೇಗೌಡ ಹೇಳಿದರು.

ಈ ಸಂದರ್ಭ ಡಾ. ಪುಟ್ಟರಾಜ್, ಪ್ರಗತಿಪರ ಬೆಳೆಗಾರರಾದ ಡಿ.ಎಸ್. ಮಲ್ಲೇಶ್, ಎಸ್.ಕೆ. ಬಸವರಾಜ್ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ಎಸ್. ಸತೀಶ್ ಅವರನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಪ್ರಾಂಶುಪಾಲ ಉಮಾಶಂಕರ್ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಗನ್ ಪಾಲ್ ನಿರ್ದೇಶಕರಾದ ಎನ್.ಕೆ. ಅಪ್ಪಸ್ವಾಮಿ, ಮಹಮ್ಮದ್ ಪಾಶ, ಎಸ್.ಪಿ. ರಾಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸರ್ಧಾರ್ ಅಹಮ್ಮದ್, ಹಿರಿಯ ಉಪನ್ಯಾಸಕ ಈ.ಡಿ. ದಯಾನಂದ್ ಉಪಸ್ಥಿತರಿದ್ದರು.