ಭಾಗಮಂಡಲ, ಮಾ.28 : ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದ ಮಂದತಿರಿಕೆ ಭಗವತಿ ದೇವಾಲಯದಲ್ಲಿ ಭಗವತಿ ದೇವಿ ಹಾಗೂ ಶಾಸ್ತಾವು ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ತಾ. 20ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಂದತಿರಿಕೆ ಭಗವತಿ ಹಾಗೂ ಶಾಸ್ತಾವು ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಗ್ರಾಮದ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ದೇವಾಲಯದಲ್ಲಿ ಗಣಪತಿ ಹೋಮ ಅಗ್ನಿಸಂಸ್ಕಾರ,ಕಳಶ ಪೂಜೆ, ಅಂಕುರ ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಶ್ರೀ ಮಂದತಿರಿಕೆ ಭಗವತಿ ಮತ್ತು ಶಾಸ್ತಾವು ದೇವರ ಪುನರ್ ಪ್ರತಿಷ್ಠೆ,ಅಷ್ಟಬಂಧ ಪ್ರತಿಷ್ಠೆ ವಿಜೃಂಭಣೆಯಿಂದ ನೆರವೇರಿತು. ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗಣಪತಿ ಹೋಮ, ಶಾಂತಿ-ಪ್ರಾಯಶ್ಚಿತ ಹೋಮಗಳನ್ನು ನೆರವೇರಿಸಿ ಮಹಾಬಲಿಪೀಠ ಪ್ರತಿಷ್ಠೆ ನೆರವೇರಿಸಲಾಯಿತು. ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.