ಕುಶಾಲನಗರ, ಮಾ 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ನೂತನವಾಗಿ ಇಂಪನ ಪುರುಷರ ಜಂಟಿ ಬಾಧ್ಯತಾ ಗುಂಪನ್ನು ಆರಂಭಿಸಲಾಯಿತು.

ಕುಶಾಲನಗರ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಗುಂಪನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ವಲಯ ಮೇಲ್ವಿಚಾರಕ ಕೆ. ಹರೀಶ್ ಮಾತನಾಡಿ, ಯೋಜನೆಯ ಶಿಸ್ತು ಮತ್ತು ನಿಯಮಕ್ಕೆ ಸದಸ್ಯರು ಬದ್ಧರಾಗಬೇಕಿದೆ. ಉಳಿತಾಯ ಮನೋಭಾವ ಬೆಳೆಸಿಕೊಳ್ಳುವದರೊಂದಿಗೆ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಸದಸ್ಯರು ಶ್ರಮಿಸಬೇಕಿದೆ ಎಂದರು. ಈ ಸಂದರ್ಭ ಗುಂಪಿನ ಸದಸ್ಯರುಗಳಿಗೆ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಯಶೋಧರ ಹಾಗೂ ಒಕ್ಕೂಟದ ಕಾರ್ಯದರ್ಶಿ ಸುಶೀಲ ಇದ್ದರು.