ಮಡಿಕೇರಿ, ಮಾ. 28 : ಕೆದಂಬಾಡಿ ಕ್ರಿಕೆಟ್ ಕಪ್ ವತಿಯಿಂದ ಗೌಡ ಜನಾಂಗದವರಿಗಾಗಿ ನಡೆಸಿಕೊಂಡು ಬರಲಾಗುತ್ತಿರುವ 25ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಉತ್ಸವದಲ್ಲಿ ಕೂಡಕಂಡಿ, ಪುದಿಯನೆರವನ, ಹೊದ್ದೆಟ್ಟಿ ತಂಡಗಳು ಮುನ್ನಡೆ ಸಾಧಿಸಿದೆ.
ಚೆಟ್ಟಿಮಾನಿಯ ಕೆದಂಬಾಡಿ ಅವರ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಇಂದು ಪೂಜಾರಿರ ತಂಟ 6 ವಿಕೆಟ್‍ಗೆ 58 ರನ್ ಗಳಿಸಿದರೆ, ದೇವಾಯಿರ ತಂಡ 6 ವಿಕೆಟ್‍ಗೆ 50 ರನ್ ಗಳಿಸಿ 8 ರನ್‍ಗಳ ಅಂತರದಿಂದ ಸೋಲನುಭವಿಸಿತು. ಪುದಿಯನೆರವನ ತಂಡ 3 ವಿಕೆಟ್‍ಗೆ 96 ರನ್ ಸೇರಿಸಿದರು. ಪಾಲಾರ್ ಗುಂಡ್ಯ ತಂಡ 5 ವಿಕೆಟ್ 57 ರನ್ ಮಾತ್ರ ಗಳಿಸಿ ಪರಾಭವಗೊಂಡಿತು. ತೊತ್ತಿಯನ ತಂಡ 9 ವಿಕೆಟ್‍ಗೆ 45 ರನ್ ಗಳಿಸಿದರೆ, ಸುಳ್ಯಕೋಡಿ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಕುಟ್ಟನ ತಂಡ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 52 ರನ್ ಗಳಿಸಿದರೆ, ಕೂಡಕಂಡಿ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಹೊದ್ದೆಟ್ಟಿ ತಂಡ 61 ರನ್ ಗಳಿಸಿದರೆ, ಕಟ್ಟೆಕೋಡಿ ತಂಡ 59 ರನ್ ಗಳಿಸಿ ಸೋಲನುಭವಿಸಿತು. ಪೂಜಾರಿರ ಹಾಗೂ ಪುದಿಯನೆರವನ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಪೂಜಾರಿರ ತಂಡ 45 ರನ್ ಗಳಿಸಿದರೆ, ಪುದಿಯನೆರವನ ತಂಡ ಜಯ ಗಳಿಸಿತು. ಕೂಡಕಂಡಿ ಹಾಗೂ ಸುಳ್ಯಕೋಡಿ ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಕೂಡಕಂಡಿ ತಂಡ ಮೂರು ವಿಕೆಟ್‍ಗೆ 96 ರನ್ ಗಳಿಸಿದರೆ, ಸುಳ್ಯಕೋಡಿ ತಂಡ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು 79 ರನ್ ಮಾತ್ರ ಗಳಿಸಿ ಸೋಲನುಭವಿಸಿತು.