ನಾಪೆÇೀಕ್ಲು, ಮಾ. 28: ಸಾಯಲೆಂದು ಆತ್ಮಹತ್ಯೆ ಮಾಡಿಕೊಂಡ ಯುವತಿಯೊಬ್ಬಳು ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ ನಂತರವೂ ಬದುಕಿರುವ ಬಗ್ಗೆ ಸೂಚನೆ ನೀಡಿ ಮತ್ತೆ ಆಸ್ಪತ್ರೆಗೆ ದಾಖಲಾಗಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಎಮ್ಮೆಮಾಡು ಗ್ರಾಮದ ಚಂಬಾರಂಡ ದಾವುದ್ ಅವರ ಪುತ್ರಿ ಸಜಿನಾ (18) ಮೃತಪಟ್ಟ ದುರ್ದೈವಿ ಯುವತಿ.ತಾ. 28 ರಂದು ಮಧ್ಯಾಹ್ನ ಈಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಳು. ಕೂಡಲೇ ಮನೆಯವರು ಇವಳನ್ನು ನಾಪೆÇೀಕ್ಲು ಖಾಸಗಿ ಆಸ್ಪತ್ರೆಗೆ ಕರೆತಂದರು. ಈಕೆಯನ್ನು ಪರೀಕ್ಷಿಸಿದ ವೈದ್ಯರು ಈಕೆ ಮೃತಪಟ್ಟಿರುವದಾಗಿ ತಿಳಿಸಿದರು. ಮೃತದೇಹದೊಂದಿಗೆ ಹಿಂತಿರುಗಿದ ಕುಟುಂಬಸ್ಥರು ಮನೆಯಲ್ಲಿ ಈಕೆಯ ಅಂತ್ಯಕ್ರಿಯೆಗೆ ಸಿದ್ಧಗೊಳಿಸುತ್ತಿದ್ದಂತೆ ಅಂಗಾಂಗಗಳಲ್ಲಿ ಚಲನೆ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಇವಳನ್ನು ನಾಪೆÇೀಕ್ಲು ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದ ಕುಟುಂಬಸ್ಥರು ಪ್ರಥಮ ಚಿಕಿತ್ಸೆ ನೀಡಿ ತುರ್ತು ಚಿಕಿತ್ಸಾ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಯುವತಿಯನ್ನು ಪರೀಕ್ಷಿಸಲಾಗಿ ಯುವತಿ ಮೃತಪಟ್ಟಿರುವದಾಗಿ ದೃಢಪಡಿಸಿದರು.

ಮರಣೋತ್ತರ ಪರೀಕ್ಷೆಯ ನಂತರ ಯುವತಿಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.