ಗುಡ್ಡೆಹೊಸೂರು, ಮಾ. 28: ನಂಜರಾಯಪಟ್ಟಣದ ಶ್ರೀ ನಂಜುಂಡೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಶ್ರೀ ನಂಜುಂಡೇಶ್ವರ, ಶ್ರೀ ಬಸವೇಶ್ವರ, ಶ್ರೀ ಕನ್ನಂಬಾಡಿಯಮ್ಮ, ಆದಿಶಕ್ತಿ ದೇವಿರಮ್ಮ ಮತು ್ತಶ್ರೀ ವೀರಭದ್ರ ಸ್ವಾಮಿಯವರ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಅಲಂಕಾರ ಪೂಜೆ, ಗಂಗೆ ಗಣಪತಿ ಅಗ್ರೋದಕ ಪೂಜೆ, ಬಲಿಪೂಜೆ ಮುಂತಾದ ಪೂಜಾ ವಿಧಿವಿಧಾನಗಳು ನಡೆದವು. ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ ನಡೆಸಿ ಮಹಾಪೂಜೆ ನಡೆಸಲಾಯಿತು.

ಈ ಸಂದರ್ಭ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಮತ್ತು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಹಾಜರಿದ್ದು ಪ್ರವಚನ ನೀಡಿದರು. ಎರಡು ದಿನ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.