ಗುಡ್ಡೆಹೊಸೂರು, ಮಾ. 28: ಇಳಿಜಾರಿನಲ್ಲಿ ಸಾಗುತ್ತಿದ್ದ ಟಿಂಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಇಲ್ಲಿಗೆ ಸಮೀಪದ ಆನೆಕಾಡುವಿನಲ್ಲಿ ಸಂಭವಿಸಿದೆ.ಇಂದು ಸಂಜೆ ಮಡಿಕೇರಿ ಕಡೆಯಿಂದ ಕುಶಾಲನಗರದತ್ತ ಟಿಂಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕಾರು (ಟಿ.ಎನ್.ಡಿ. 1474) ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಅದರೊಳಗಡೆ ಸಿಲುಕಿದ (ಮೊದಲ ಪುಟದಿಂದ) ತಮಿಳುನಾಡು ಮೂಲದ ಅರುಣ್ ಪಾಂಡ್ಯನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಿಸುತ್ತಿದ್ದ ಸುಬ್ರಮಣಿ ಅವರಿಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ಇನ್ನೀರ್ವರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ನಜ್ಜುಗುಜ್ಜಾದ ಕಾರಿನೊಳಗಿನಿಂದ ಮೃತದೇಹವನ್ನು ಹೊರತೆಗೆಯಲು ಸುಮಾರು ಅರ್ಧ ಗಂಟೆಗಳ ಕಾಲಾವಕಾಶ ಬೇಕಾಯಿತು. ಅವಘಡದಿಂದಾಗಿ ಹೆದ್ದಾರಿಯಲ್ಲಿ ಒಂದೂವರೆ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೃತ ಅರುಣ್ ಪಾಂಡ್ಯನ್ ಜಿಯೋ ಕೇಬಲ್ ಅಳವಡಿಸುವ ಗುತ್ತಿಗೆ ಸಂಸ್ಥೆಯ ಮಾಲೀಕನಾಗಿದ್ದು, ಊಟ ಮಾಡಲೆಂದು ಕುಶಾಲನಗರದತ್ತ ತೆರಳುತ್ತಿದ್ದರು. ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ