ಸುಂಟಿಕೊಪ್ಪ ನಿವಾಸಿ, ಹಿರಿಯ ವರ್ತಕ ಕೆ.ಎಸ್ ಸುಬ್ಬಪ್ಪ ಪೂಜಾರಿ (92) ತಾ. 27ರಂದು ನಿಧನರಾಗಿದ್ದಾರೆ. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 28ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಮಾದಾಪುರ ರಸ್ತೆಯ ಹಿಂದು ಮುಕ್ತಿ ಧಾಮದಲ್ಲಿ ನೆÀರವೇರಲಿದೆ.

* ಕಡಿಯತ್ತೂರು ಗ್ರಾಮ ನಿವಾಸಿ ಎಪಿಸಿಎಂಎಸ್ ನಿವೃತ್ತ ವ್ಯವಸ್ಥಾಪಕ ತೋರೆರ ಎ. ಮುತ್ತಪ್ಪ (74) ತಾ. 27ರಂದು ನಿಧನರಾದರು. ಅಂತ್ಯಕ್ರಿಯೆ ತಾ. 28ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.