ಮಡಿಕೇರಿ, ಮಾ. 27: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಸಣ್ಣ ಕಥಾ ಸ್ಪರ್ಧೆ ಆಯೋಜಿಸಲಾಗಿದೆ.
ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ ಹವ್ಯಕ ಭಾಷೆಯಲ್ಲಿ. ಹವ್ಯಕ ಹೈಸ್ಕೂಲು, ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಬಹುದು. ಈ ತನಕ ಬೇರೆಲ್ಲೂ ಪ್ರಕಟವಾಗದ ಸಾಮಾಜಿಕ ಕಥೆಗಳನ್ನು ಎಂಟು ಪುಟಕ್ಕೆ ಮೀರದಂತೆ (ಟೈಪ್ ಮಾಡಿದ್ದಾದರೆ ಉತ್ತಮ, ಸಾದಾರಣ 2 ಸಾವಿರ ಪದಗಳು) ಕಾಗದದ ಒಂದೇ ಬದಿಗೆ ಬರೆದು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಬೇರೆ ಕಾಗದದಲ್ಲಿ ಬರೆದು ಕಳುಹಿಸಿಕೊಡಬಹುದು.
ತಲಪಲು ಕೊನೆ ದಿನ ಮೇ 25. ವಿಜಯಾ ಸುಬ್ರಹ್ಮಣ್ಯ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣ ಮಂಗಲ, ಕುಂಬಳೆ ಪೋಸ್ಟ್-671321, ಮೊಬೈಲ್ 8547214125 ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.