ಮಡಿಕೇರಿ, ಮಾ. 26: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಮಾಜ ಕಾರ್ಯ ವಿಭಾಗ ಹಾಗೂ ಜಿಲ್ಲಾಸ್ಪತ್ರೆ, ವಿಕಾಸ್ ಜನಸೇವಾ ಟ್ರಸ್ಟ್ ಸಹಯೋಗದಲ್ಲಿ ನಗರದ ಕಾನ್ವೆಂಟ್ ಜಂಕ್ಷನ್‍ನಲ್ಲಿರುವ ವಿಕಾಸ್ ಜನಸೇವಾ ಆಶ್ರಮದ ಸಭಾಂಗಣದಲ್ಲಿ ತಾ. 28 ರಂದು ಬೆಳಿಗ್ಗೆ 10.30 ರಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸದುಪಯೋಗವನ್ನು ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ಪಡೆದುಕೊಳ್ಳಬೇಕಾಗಿ ಪ್ರಕಟಣೆ ಕೋರಿದೆ.