ಮಡಿಕೇರಿ, ಮಾ. 26 : ಧಾರ್ಮಿಕ ಲೌಕಿಕ ವಿದ್ಯಾಭ್ಯಾಸ ಮಟ್ಟದಲ್ಲಿ ಎರಡೂವರೆ ದಶಕಗಳನ್ನು ದಾಟಿದ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಹಿಮ್ಮಾತ್ ಸಂಸ್ಥೆಯ ಸಮ್ಮೇಳನದ ಪ್ರಚಾರ ಸಂಗಮ ತಾ. 27 ರಂದು (ಇಂದು) ನಗರದಲ್ಲಿ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಮಡಿಕೇರಿ ಟೌನ್‍ಹಾಲಿನಲ್ಲಿ ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲ ಕುಂಞÂ ಫೈಝಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಸ್ತುತ ಸಂಗಮವನ್ನು ಕೊಡಗು ಜಿಲ್ಲಾ ಜಂಇಯ್ಯತುಯಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎಡಪ್ಪಾಲ ಮುಹಮ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.

ಹಫೀಳ್ ಸಅದಿ ಕೊಳಕ್ಕೇರಿ, ಇಸ್ಮಾಇಲ್ ಸಖಾಫಿ ಕೊಂಡಂಗೇರಿ, ಕರೀಮ್ ಫಾಳಿಲಿ ಹಾಕತ್ತೂರ್, ಶಾದುಲಿ ಪೈಝಿ, ಹುಸೈನ್ ಸಖಾಫಿ ಎಮ್ಮೆಮ್ಮಾಡು, ಅಶ್ರಫ್ ಅಹ್ಸನಿ ಅನ್ಸಾರುಲ್ ಹುದಾ, ಉಮರ್ ಸಖಾಫಿ ಅಲ್-ಇಹ್ಸಾನ್, ಲತೀಫ್ ಹಾಜಿ ಸುಂಟಿಕೊಪ್ಪ, ಹಂಝ ಕೊಟ್ಟಮುಡಿ, ಅಬ್ದುಲ್ಲಾ ನೆಲ್ಯಾಹುದಿಕೇರಿ, ಇಬ್ರಾಹೀಮ್ ನಾಪೋಕ್ಲು, ಆಲಿಹಾಜಿ ಮಡಿಕೇರಿ, ಅಬೂಬಕರ್ ಹಾಜಿ ಹಾಕತ್ತೂರ್ ಭಾಗವಹಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಸಂದೇಶ ಭಾಷಣ ಹಾಗೂ ಮೂಸಾ ಸಖಾಫಿ ಕಳತ್ತೂರ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.