ವೀರಾಜಪೇm,É ಮಾ. 25: ಅಮ್ಮತ್ತಿ ಒಂಟಿಯಂಗಡಿ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರೀಡಾಕೂಟವನ್ನು ಸಂಘದ ಉಪಾಧ್ಯಕ್ಷ ಪ್ರಭು ಉದ್ಘಾಟಿಸಿದರು.

ಸಂಘದ ನಿರ್ದೇಶಕರಾದ ಕೆ.ಪಿ. ನಾಗರಾಜು, ಸಂಘದ ವಿ.ಎಸ್. ತಿಮ್ಮಯ್ಯ, ವಿ.ಎನ್. ಮನೋಜ್, ವಿ.ಎ. ರಾಜು, ವಿ.ಜೆ. ನಾಗೇಶ್ ವಿ.ಎಸ್. ದಿನೇಶ್, ವಿ.ಎಂ. ಅಶೋಕ್ ವಿ.ಕೆ. ಆನಂದ್, ಕಾರ್ಯದರ್ಶಿ ವಿ.ಆರ್. ಅರುಣ್ ಹಾಗೂ ಬೈರಂಬಾಡ ಸಹಕಾರ ಸಂಘದ ವ್ಯವಸ್ಥಾಪಕ ತಮ್ಮಯ್ಯ ಮತ್ತಿತರರು ಹಾಜರಿದ್ದರು.

ಕ್ರೀಡಾಕೂಟದ ಅಂಗವಾಗಿ ಮಹಿಳೆಯರು ಪುರುಷರಿಗೆ ಹಗ್ಗ ಜಗ್ಗಾಟ, ಎಲ್ಲ ವಯಸ್ಸಿನವರಿಗೆ ಓಟದ ಸ್ಪರ್ಧೆ, ಸಂಗೀತ ಕುರ್ಚಿ, ವಿಷದ ಚೆಂಡು, ಮಕ್ಕಳಿಗಾಗಿ ಕಾಳು ಹೆಕ್ಕುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.