ಮಡಿಕೇರಿ, ಮಾ. 25: ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

ವಿಶೇಷ ಅನುದಾನದಿಂದ ಹಾಕತ್ತೂರು, ಪಾರಾಣೆ, ಚೆಯ್ಯಂಡಾಣೆ, ಕಕ್ಕಬೆ, ಬಲ್ಲಮಾವಟಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು ಮತ್ತು ಅಭಿವೃದ್ಧಿ ಹೊಂದಿದ ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಕರ್ನಾಟಕ ಸಹಕಾರ ಮಹಾ ಮಂಡಳದ ನಿರ್ದೇಶಕ ಮನು ಮುತ್ತಪ್ಪ, ಕೋಡಿರ ಪ್ರಸನ್ನ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಮತ್ತೊಂದೆಡೆ ಮೇಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಶಾಸಕರು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಮೇಕೇರಿ ಸಾರ್ವಜನಿಕ ರಸ್ತೆ ಅಭಿವೃದ್ಧಿ ರೂ. 2 ಲಕ್ಷ, ಸುಭಾಷ್ ನಗರದಿಂದ ಅರುವತ್ತೊಕ್ಲು ರಸ್ತೆ ಹಾಗೂ ಚೊಂಡಿರ ಕುಟುಂಬಸ್ಥರ ರಸ್ತೆ ರೂ. 3 ಲಕ್ಷ, ತಾಳತ್‍ಮನೆ ಅರುವತ್ತೊಕ್ಲು ರಸ್ತೆ ರೂ. 4 ಲಕ್ಷ, ಬಿಳಿಗೇರಿಯಿಂದ ಅರುವತ್ತೊಕ್ಲು ರಸ್ತೆ ರೂ. 3 ಲಕ್ಷ, ಕಾನಡ್ಕ ಸೀತಾರಾಮ ಅವರ ಮನೆಗೆ ತೆರಳುವ ಕಾಂಕ್ರಿಟ್ ರಸ್ತೆ ರೂ. 2 ಲಕ್ಷ, ಮೇಕೇರಿ ಗ್ರಾ.ಪಂ.ಯಿಂದ ಬಿಳಿಗೇರಿ ಹರಿಜನ ಕಾಲೋನಿ ಕಾಂಕ್ರಿಟ್ ರಸ್ತೆಗೆ ರೂ. 2 ಲಕ್ಷ ವೆಚ್ಚ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಸದಸ್ಯೆ ಕುಮುದಾ ರಶ್ಮಿ, ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಕೆ.ಎಸ್. ಭೀಮಯ್ಯ, ಸದಸ್ಯರಾದ ಅರ್ಪಿತಾ ಸಂಧ್ಯಾ, ಸಿ.ಎ. ಕಾರ್ಯಪ್ಪ, ನಾಚಪ್ಪ, ಪೂಜಾರಿರ ರಕ್ಷಿತ್, ವಾಣಿ, ಪುಷ್ಪ, ಮಾಜಿ ಅಧ್ಯಕ್ಷರಾದ ಕಾಂತ ಕಾವೇರಪ್ಪ, ಸಹಕಾರÀ ಮಹಾ ಮಂಡಳದ ನಿರ್ದೇಶಕ ಮನು ಮುತ್ತಪ್ಪ ಹಾಗೂ ಕೋಡಿರ ಪ್ರಸನ್ನ ಹಾಜರಿದ್ದರು.