ಮೂರ್ನಾಡು, ಮಾ. 25: ತಾಯಿ ಮಮತೆ ಮನುಷ್ಯರಿಗಷ್ಟೆ ಅಲ್ಲ, ಪ್ರಾಣಿಗಳಿಗೂ ಕಾಡುತ್ತದೆ ಎಂಬುದಕ್ಕೆ ಕಣ್ಣೆದುರೆ ತನ್ನ ಕಂದನನ್ನು ಕಳೆದುಕೊಂಡ ಶ್ವಾನ ಸಾಕ್ಷಿಯಾಯಿತು.ಮೂರ್ನಾಡು ವಿದ್ಯಾಸಂಸ್ಥೆಯ ಬಾಚ್ಚೆಟಿರ ಲಾಲು ಮುದ್ದಯ್ಯ ಕ್ರೀಡಾಂಗಣದ ಬಳಿ ಶನಿವಾರ ವಾಹನ ಅಪಘಾತಕ್ಕೆ ನಾಯಿ ಮರಿಯೊಂದು ತುತ್ತಾಗಿ ಸ್ಥಳದಲ್ಲೇ ಮೃತಪಟ್ಟಿತು. ತನ್ನ ಕಂದನೊಂದಿಗೆ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ತಾಯಿ ತನ್ನ ಕಂದನ ಸಾವನ್ನು ಕಣ್ಣೆದುರು ಕಂಡು ಶನಿವಾರದಿಂದ ತನ್ನ ಕಂದನ ಕಳೇಬರದ ಹತ್ತಿರದಲ್ಲಿ ಮಲಗಿಕೊಂಡು ಮೂಕ ವೇದನೆ ಅನುಭವಿಸಿತು. ಭಾನುವಾರ ಸಂಜೆ ಆದರೂ ಕೂಡ ತಾಯಿ ನಾಯಿ ಸ್ಥಳದಿಂದ ಕದಲದೇ ತನ್ನಲ್ಲಿ ತಾನು ಕೊರಗುತ್ತಿದ್ದುದು ಕಂಡುಬಂತು.