ನಾಪೋಕು, ಮಾ. 24 :ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ಭಾನುವಾರ ರಾತ್ರಿ ಇರುಬೊಳಕ್ ನಡೆದು ಭಂಡಾರಕ್ಕಾಗಿ ಕಾವುಪೊರೆಗೆ ಗ್ರಾಮಸ್ಥರು ತೆರಳುವರು. ಸೋಮವಾರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಲಿದೆ. ಅಂದು ಸಾಂಪ್ರದಾಯಿಕ ಎತ್ತುಪೋರಾಟ, ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಯನ್ನು ಏರ್ಪಡಿಸಲಾಗಿದೆ. ಸಂಜೆ ದೇವರ ನೃತ್ಯಬಲಿ, ಮಂಗಳವಾರ ದೇವರ ಅವಭೃತ ಸ್ನಾನ ನಡೆಯಲಿದ್ದು, ಬಳಿಕ ರಾತ್ರಿಯು ನೃತ್ಯಬಲಿ ನಡೆಯಲಿದೆ. ಬುಧವಾರ ನಾಗಪೂಜೆ, ಅನ್ನಸಂತರ್ಪಣೆ, ಕಳಶ ನಡೆಯಲಿದೆ.