ಮಡಿಕೇರಿ, ಮಾ. 23: ಮೂರ್ನಾಡು ಸನಿಹದ ಹೊದ್ದೂರುವಿನಲ್ಲಿ ವಿವಿಧ ದೇವರ ವಾರ್ಷಿಕ ಉತ್ಸವ ತಾ. 28 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ.ಈ ಪ್ರಯುಕ್ತ ತಾ. 28 ರಂದು ಸಂಜೆ ದೀಪಾರಾಧನೆ (ಅಂದಿಬೊಳಕ್), ತಾ. 29 ರಂದು ಬೆಳಿಗ್ಗೆ ಬೋಡ್ ಹಬ್ಬ, ತಾ. 30 ರಂದು ಭದ್ರಕಾಳಿ ಉತ್ಸವ, ಅಪರಾಹ್ನದ ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಭಗವತಿ ದೇವಿಯ ಅವಭೃತ ಸ್ನಾನ, ಮೆರವಣಿಗೆ, ದೇವಿಯ ನರ್ತನ, ಅಲಂಕಾರ ಪೂಜೆ ನಡೆಯಲಿದೆ. ತಾ. 31 ರಂದು ಕಲಶ, ಚಾಮುಂಡಿ ದೇವಳದಲ್ಲಿ ಅಂದಿ ತೋಯತ, ಏಪ್ರಿಲ್ 1 ರಂದು ಮೇಲೇರಿಗೆ ಅಗ್ನಿ ಸ್ಪರ್ಶ ಸೇರಿದಂತೆ ವಿವಿಧ ಕೋಲಗಳು, ಏ. 2 ರಂದು ಅಜ್ಜಪ್ಪ-ವಿಷ್ಣು ಮೂರ್ತಿ ಉತ್ಸವ ನಡೆಯಲಿದೆ.