ಮಡಿಕೇರಿ, ಮಾ. 23: ಕೊಡಗು ಟೈಲರ್ಸ್ ಸಂಘದ 9ನೇ ವರ್ಷದ ವಾರ್ಷಿಕೋತ್ಸವ ತಾ. 25ರಂದು ಬೆಳಿಗ್ಗೆ 10.30ಕ್ಕೆ ಕಾವೇರಿ ಕಲಾಕ್ಷೇತ್ರ (ಟೌನ್ಹಾಲ್) ಮಡಿಕೇರಿಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ, ಕೆ.ಎಸ್.ಟಿ.ಎ. ರಾಜ್ಯ ಅಧ್ಯಕ್ಷ ಕೆ.ಎಸ್. ಆನಂದ, ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಸಂತ, ಕಾರ್ಯದರ್ಶಿ ಯಂ.ಯು. ಅಪ್ರಪುನ್ನೀಸ್ ಹಾಗೂ ಇನ್ನಿತರ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.