ನಾಪೆÉÇೀಕ್ಲು, ಮಾ. 22: ಸರ್ಕಲ್ ಫೆನ್ಸ್‍ಂಗ್ ಫೆಡರೇಷನ್ ಆಫ್ ಇಂಡಿಯಾ

ವತಿಯಿಂದ ಇತ್ತೀಚೆಗೆ ಕೇರಳದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಆರ್ಟಿಸ್ಟಿಕ್ ಫೆನ್ಸ್‍ಂಗ್ ಸ್ಪರ್ಧೆಯ 70 ಕೆ.ಜಿ. ಭಾರದ ಸೀನಿಯರ್ ವಿಭಾಗದಲ್ಲಿ ಕೊಡಗಿನ ಯುವಕ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಎರಡನೇ ವರ್ಷದ ಬಿ.ಕಾಂ. ವಿದ್ಯಾರ್ಥಿ ಕೈಬುಲೀರ ಕುಟ್ಟಪ್ಪ ರಾಜ್ಯದ ಸ್ಪರ್ಧಿಯಾಗಿ ಭಾಗವಹಿಸಿ ಮೊದಲ ಸ್ಥಾನ ಪಡೆದು ಚಿನ್ನದ ಪದÀಕ ಮತ್ತು ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ.

ಈತ ನೆಲಜಿ ಗ್ರಾಮದ ಕೈಬುಲೀರ ಸಾಬು ಗಣಪತಿ ಮತ್ತು ಭಾರತಿ ದಂಪತಿಯ ಪುತ್ರರಾಗಿದ್ದಾರೆ.