ವೀರಾಜಪೇಟೆ, ಮಾ. 22: ನಗರದ ಪಂಜರ್‍ಪೇಟೆ ನಿವಾಸಿ ಸನೀಲ್ ಪಿ.ಜೆ. ಮತ್ತು ಸುಮಿ ದಂಪತಿಗ¼ ಪ್ರಾಯ 2 ವರ್ಷದ ಗಂಡು ಮಗು ಮನ್ವಿತ್ ರಕ್ತದಲ್ಲಿ ಬಿಳಿ ರಕ್ತ ಕಣದ ಕೊರತೆಯಿಂದ ಬಳಲುತ್ತಿದ್ದು, ಮಗುವಿನ ಚಿಕಿತ್ಸೆಯು ಇದೀಗ ಬೆಂಗಳೂರಿನ ಇಂದಿರಾ ಗಾಂಧಿ ಅಸ್ಪತ್ರೆಯಲ್ಲಿ ನಡೆಯುತ್ತಿದೆ. ವೈದ್ಯರು ಹೇಳಿರುವಂತೆ ಪ್ರತಿ ತಿಂಗಳು ರಕ್ತ ಬದಲಿಸಿ ಹಾಗೂ ಮಗುವಿಗೆ ಹೊಸ ರಕ್ತ ಸೇರ್ಪಡೆಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ಮಗುವಿನ ಚಿಕಿತ್ಸೆ ಕೊಡಿಸಲು ಮತ್ತು ಸರ್ಜರಿ ಮಾಡಲು 15 ಲಕ್ಷ ವೆಚ್ಚವಾಗಲಿದೆ ಎಂದು ಅಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಗುವಿನ ಪೋಷಕರು ಕೂಲಿ ಅವಲಂಭಿತರಾಗಿದ್ದು, ಮಗುವಿನ ಚಿಕಿತ್ಸೆಯ ವೆಚ್ಚ ಭರಿಸಲು ಶಕ್ತರಲ್ಲದ ಪೋಷಕರು. ಸಹೃದಯಿ ಸಾರ್ವಜನಿಕರಲ್ಲಿ ಹಣ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಧನಸಹಾಯ ಮಾಡುವ ದಾನಿಗಳು ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುವಂತೆ ಕೋರಿದ್ದಾರೆ.

ಹೆಚ್ಚಿನ ವಿವರಗಳಿಗೆ : ಸನೀಲ್ ಪಿ.ಜೆ., ಕೆನರಾ ಬ್ಯಾಂಕ್ ಶಾಖೆ ವೀರಾಜಪೇಟೆ: ಖಾತೆ ಸಂಖ್ಯೆ: 0559101022388, ಐ.ಎಫ್.ಸಿ ಕೋಡ್: ಸಿ.ಎನ್.ಆರ್.ಬಿ. 0000559, ದೂರವಾಣಿ 9008828688.