ಗೋಣಿಕೊಪ್ಪಲು, ಮಾ. 21: ಕಸಿ ತಂತ್ರಜ್ಞಾನದಿಂದ ಪಡೆದ ಸಸಿಗಳನ್ನು ಬಳಸಿ ಬೆಳೆಗಾರರು ಉತ್ತಮ ಇಳುವರಿ ಪಡೆಯಬಹುದು ಎಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಎಂ. ಜಗದೀಶ್ ಹೇಳಿದರು.
ಗೋಣಿಕೊಪ್ಪಲುವಿನ ಕಾಫಿ ಬೋರ್ಡ್ ಸಭಾಂಗಣದಲ್ಲಿ ಕಸಿ ತಂತ್ರಜ್ಞಾನ ಹಾಗೂ ಅನುತ್ಪಾದಕ ಗಿಡಗಳನ್ನು ಕಸಿ ಮಾಡುವ ವಿಷಯದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ವಿಜ್ಞಾನಿ ಎಂ. ಜಗದೀಶ್ ಕಸಿ ತಂತ್ರಜ್ಞಾನದ ಪ್ರಾತ್ಯಕ್ಷಿತೆ ನೀಡಿದರು. ಸಸ್ಯ ತಜ್ಞ ಡಾ. ಶಿವಲಿಂಗು ಕಸಿ ತಂತ್ರಜ್ಞಾನ ಬಳಸಿ ಕಾಫಿ ಸಸಿಗಳನ್ನು ಬೆಳೆಸುವ ಬಗ್ಗೆ ಬೆಳೆಗಾರರಿಗೆ ಸಲಹೆಗಳನ್ನು ನೀಡಿದರು.
15 ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗೋಣಿಕೊಪ್ಪಲು ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ (ಪ್ರಬಾರ) ಸಣ್ಣುವಂಡ ರಮೇಶ್ ಇದ್ದರು.