ವೀರಾಜಪೇಟೆ, ಮಾ. 21: ತನ್ನ ಎಲ್ಲ ಬೆಂಬಲಿಗರ ಸಹಿತ ಕಾಂಗ್ರೆಸ್ ಸೇರಲು ಮಾಜಿ ಸಚಿವ ಯಂ.ಸಿ. ನಾಣಯ್ಯ ನಿರ್ಧರಿಸಿದ್ದಾರೆ. ಇಂದು ವೀರಾಜಪೇಟೆ ಟೌನ್ ಬ್ಯಾಂಕ್ ಭವನದಲ್ಲಿ ನಡೆದ ಜೆ.ಡಿ.ಎಸ್. ಪಕ್ಷದ ವಿಭಿನ್ನ ಬಣದ ಸುಮಾರು 58 ಮಂದಿ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ನಾಣಯ್ಯ ಅವರು ಭಾಗವಹಿಸದಿದ್ದರೂ ಇತರ ನಾಯಕರುಗಳ ಒತ್ತಾಯದ ಮೇರೆಗೆ ನಾಣಯ್ಯ ಬಳಿಕ ತಮ್ಮ ನಿಲುವು ಪ್ರಕಟಿಸಿದ್ದಾರೆ.

ಜೆ.ಡಿ.ಎಸ್. ಮಾಜಿ ಅಧ್ಯಕ್ಷ ಅಜ್ಜಿಕುಟ್ಟಿರ ಶಾಂತು ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಈ ಹಿಂದೆ ನಾಣಯ್ಯ ಬೆಂಬಲಿಗರು ಹಲವು ಬಾರಿ ಸಭೆ ನಡೆಸಿದ್ದರೂ ನಾಣಯ್ಯ ಅವರು ತಟಸ್ಥ ಧೋರಣೆ ತಳೆದಿದ್ದುದರಿಂದ ಈವರೆಗೆ ಕಾಂಗ್ರೆÉಸ್ ಸೇರುವ ನಿರ್ಧಾರ ತೆರೆ ಮರೆಯಲ್ಲಿಯೇ ಇದ್ದುದು ಇಂದು ನಿರ್ಣಾಯಕ

(ಮೊದಲ ಪುಟದಿಂದ) ಹಂತ ತಲುಪಿದೆ. ಜೆ.ಡಿ.ಎಸ್. ನಲ್ಲಿ ನಾಣಯ್ಯ ಅವರನ್ನು ಕಡೆಗಣಿಸುತ್ತ ಬಂದಿರುವ ಕುರಿತು ಇಂದಿನ ಸಭೆಯಲ್ಲಿ ಅಸಮಾಧಾನ ಹೊಗೆಯಾಡಿತು. ಅಲ್ಲದೆ ಜೆ.ಡಿ.ಎಸ್. ರಾಜ್ಯ ವರಿಷ್ಠ ಮಂಡಳಿ ಕೂಡ ನಾಣಯ್ಯ ಅವರನ್ನು ಕಡೆಗಣಿಸಿತ್ತು. ಇದರಿಂದ ನಾಣಯ್ಯ ಬಣದ ನಾಯಕರು, ಕಾರ್ಯಕರ್ತರು ಜೆ.ಡಿ.ಎಸ್. ನಲ್ಲಿ ಮುಂದುವರಿಯಲೇ ಬಾರದೆನ್ನುವ ನಿರ್ಧಾರಕ್ಕೆ ಬಂದಿದ್ದರು.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮಡಿಕೇರಿಗೆ ಆಗÀಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಣಯ್ಯ ಅವರ ಮನೆಗೆ ತೆರಳಿ ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ದರು.

ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ತಾ. 25 ರಂದು ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ (ಮೊದಲ ಪುಟದಿಂದ) ಹಂತ ತಲುಪಿದೆ. ಜೆ.ಡಿ.ಎಸ್. ನಲ್ಲಿ ನಾಣಯ್ಯ ಅವರನ್ನು ಕಡೆಗಣಿಸುತ್ತ ಬಂದಿರುವ ಕುರಿತು ಇಂದಿನ ಸಭೆಯಲ್ಲಿ ಅಸಮಾಧಾನ ಹೊಗೆಯಾಡಿತು. ಅಲ್ಲದೆ ಜೆ.ಡಿ.ಎಸ್. ರಾಜ್ಯ ವರಿಷ್ಠ ಮಂಡಳಿ ಕೂಡ ನಾಣಯ್ಯ ಅವರನ್ನು ಕಡೆಗಣಿಸಿತ್ತು. ಇದರಿಂದ ನಾಣಯ್ಯ ಬಣದ ನಾಯಕರು, ಕಾರ್ಯಕರ್ತರು ಜೆ.ಡಿ.ಎಸ್. ನಲ್ಲಿ ಮುಂದುವರಿಯಲೇ ಬಾರದೆನ್ನುವ ನಿರ್ಧಾರಕ್ಕೆ ಬಂದಿದ್ದರು.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮಡಿಕೇರಿಗೆ ಆಗÀಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಣಯ್ಯ ಅವರ ಮನೆಗೆ ತೆರಳಿ ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ದರು.

ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ತಾ. 25 ರಂದು ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ಸೇರ್ಪಡೆಗೊಳ್ಳುವಂತೆ ಇಂದಿನ ಸಭೆಯಲ್ಲಿ ನಿರ್ಧರಿಸ ಲಾಯಿತು.

ಸಭೆಯಲ್ಲಿ ಪ್ರಮುಖರುಗಳಾದ ಡಿ.ಸಿ.ಸಿ. ಬ್ಯಾಂಕ್À ಮಾಜಿ ಅಧ್ಯಕ್ಷ ಮಾತಂಡ ರಮೇಶ್, ಮಾತಂಡ ಕಾಶಿ ಕಾವೇರಪ್ಪ, ಕೆ.ಪಿ. ನಾಗರಾಜ್, ಕೋಲತಂಡ ಬೋಪಯ್ಯ, ಚೇಂದ್ರಿಮಾಡ ಗಣೇಶ್ ನಂಜಪ್ಪ, ಕಳ್ಳಿಚಂಡ ನಟು, ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ, ಮಡಿಕೇರಿಯ ಮೂಡಾದ ಮಾಜಿ ಅಧ್ಯಕ್ಷ ಮುನೀರ್ ಅಹ್ಮದ್ ಮೊದಲಾದವರು ಹಾಜರಿದ್ದರು.