ನಾಪೆÇೀಕ್ಲು, ಮಾ. 21: ಸುಮಾರು 3.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ತೆರಳುವ ಕಾಂಕ್ರೀಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉದ್ಘಾಟಿಸಿದರು.ನಂತರ ದೇವಳಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ಉಸ್ತುವಾರಿ ಸಚಿವನಾಗಿ ಮೊದಲ ಬಾರಿಗೆ ದೇವಳಕ್ಕೆ ಭೇಟಿ ನೀಡಿದ್ದ ಸಂದರ್ಭ ಭಕ್ತಾದಿಗಳು, ಭಕ್ತಜನ ಸಂಘದವರು ರಸ್ತೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಅದರ ಫಲವಾಗಿ ಶೇ. 80 ರಷ್ಟು ರಸ್ತೆ ಕಾಮಗಾರಿ ಈಗ ಪೂರ್ಣಗೊಂಡಿದೆ. ಉಳಿದ ಶೇ. 20ರಷ್ಟು ಕಾಮಗಾರಿ ಒಂದು ತಿಂಗಳ ಒಳಗೆ ಮುಕ್ತಾಯಗೊಳ್ಳಲಿದೆ ಎಂದರು.ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇದು ಬಹಳ ದಿನಗಳ ಬೇಡಿಕೆಯಾಗಿತ್ತು. ಸಚಿವರ ವಿವೇಚನ ನಿಧಿಯಿಂದ ಶಾಶ್ವತ ರಸ್ತೆ ನಿರ್ಮಿಸಲಾಗಿದೆ. ಅವರಿಗೆ ಎಲ್ಲಾ ಭಕ್ತರ ಮತ್ತು ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮಳೆ ದೇವ ಪಾಡಿ ಶ್ರೀ ಇಗ್ಗುತ್ತಪ್ಪ ಇಡೀ ಕರ್ನಾಟಕದ ಜನರ ನೀರಿನ ಬವಣೆ ನೀಗಿಸಲಿ ಎಂದು ಪ್ರಾರ್ಥಿಸಿದರು.

(ಮೊದಲ ಪುಟದಿಂದ) ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಮಾತನಾಡಿ ದೇವಳದ ಸುತ್ತು ತಡೆಗೋಡೆ ನಿರ್ಮಿಸುವದು, ಸಿ.ಸಿ ಕ್ಯಾಮರಾ ಅಳವಡಿಸುವದು ಹಾಗೂ ದೇವಳದ ಎದುರು ನೂತನ ಮೆಟ್ಟಿಲು ನಿರ್ಮಾಣಕ್ಕೆ ಹಣದ ಕೊರತೆ ಇದ್ದು, ಸರಕಾರದಿಂದ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ

(ಮೊದಲ ಪುಟದಿಂದ) ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಮಾತನಾಡಿ ದೇವಳದ ಸುತ್ತು ತಡೆಗೋಡೆ ನಿರ್ಮಿಸುವದು, ಸಿ.ಸಿ ಕ್ಯಾಮರಾ ಅಳವಡಿಸುವದು ಹಾಗೂ ದೇವಳದ ಎದುರು ನೂತನ ಮೆಟ್ಟಿಲು ನಿರ್ಮಾಣಕ್ಕೆ ಹಣದ ಕೊರತೆ ಇದ್ದು, ಸರಕಾರದಿಂದ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಗಿರೀಶ್, ಕಲಿಯಂಡ ಸಂಪ ಅಯ್ಯಪ್ಪ, ಕುಡಿಯರ ಪೆÇನ್ನಪ್ಪ, ನಿರ್ದೇಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಪಾಂಡಂಡ ನರೇಶ್, ಬಡಕಡ ಸುರೇಶ್, ಕೋಡಿಮಣಿಯಂಡ ಸುರೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಟೆರ ನೈಲ್ ಚಂಗಪ್ಪ, ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ರಸ್ತೆಗೆ ಸ್ಥಳ ದಾನ ನೀಡಿದ ಮೇಚಂಡ ಜಯ, ಗ್ರಾಮಸ್ಥರಾದ ಕೇಟೋಳಿರ ಸನ್ನಿ ಸೋಮಣ್ಣ, ಚೋವಂಡ ಜೀಜ, ಬಾಚಮಂಡ ಭರತ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಇದ್ದರು.