ಮಡಿಕೇರಿ, ಮಾ. 20: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿನ ಸ್ಪೆಷಲ್ ಕೇಸ್ (ಎನ್.ಡಿ.ಪಿ.ಎಸ್) ಸಂಖ್ಯೆ 2/2003 ಹಾಗೂ 13/2004ರ ಪ್ರಕಣಕ್ಕೆ ಸಂಬಂಧಿಸಿದಂತೆ 16 ಎಚ್‍ಪಿ ಪಂಪ್‍ಸೆಟ್, ಅಲ್ಯುಮೀನಿಯಮ್ ಪೈಪುಗಳು, ಪ್ಲಾಸ್ಟಿಕ್ ಬಿಂದಿಗೆಗಳು, ಗುದ್ದಲಿಗಳು ಹಾಗೂ ರಬ್ಬರ್ ಪೈಪುಗಳು ಈ ಸ್ವತ್ತುಗಳಿಗೆ ಸಂಬಂಧಿಸಿದ ಇಲಾಖೆ ನಿಗದಿಪಡಿಸಿದ ಮೊತ್ತದಂತೆ ಬಹಿರಂಗ ಹರಾಜನ್ನು ತಾ. 28 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಬಹಿರಂಗ ಹರಾಜು ನಡೆಸಲಾಗುವದು ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.