ಕರಿಮೆಣಸು ಹರಾಜು
ಮಡಿಕೇರಿ, ಮಾ. 19: ಸಿದ್ದಾಪುರ ಪೊಲೀಸರು ಪ್ರಕರಣವೊಂದರ ಸಂಬಂಧ ವಶಪಡಿಸಿಕೊಂಡಿರುವ 1400 ಕೆ.ಜಿ. ಕರಿಮೆಣಸನ್ನು ತಾ. 23ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಯಾಲಯದ ನಿರ್ದೇಶನದಂತೆ ಹರಾಜುಗೊಳಿಸಿ, ಬಂದ ಹಣವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಪಾವತಿಸಲು ಆದೇಶಿಸಲಾಗಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.