ಮಡಿಕೇರಿ, ಮಾ. 19: ಸೌಭಾಗ್ಯ ಯೋಜನೆಯಡಿ ವಿದ್ಯುತ್ ರಹಿತ ಬಿ.ಪಿಎಲ್ ಕಾರ್ಡ್‍ದಾರರ ವಾಸದ ಮನೆಗಳಿಗೆ ಉಚಿತ ಹಾಗೂ ಎ.ಪಿ.ಎಲ್ ಕಾರ್ಡ್‍ದಾರರ ವಾಸದ ಮನೆಗಳಿಗೆ ರೂ. 500 ವಾವತಿಸಿ ವಿದ್ಯುತ್ ಸಂಪರ್ಕ ಪಡೆಯಬಹು ದಾಗಿದೆ.

ಅದ್ದರಿಂದ ವಿದ್ಯುತ್ ಸಂಪರ್ಕ ಹೊಂದಿಲ್ಲದ ಸಾರ್ವ ಜನಿಕರು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್‍ಪ್ರತಿ, ಬಿ.ಪಿ.ಎಲ್/ಎ.ಪಿ.ಎಲ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ವಿವರ, ಚುನಾವಣಾ ಗುರುತಿನ ಚೀಟಿ, ಇತ್ತೀಚಿನ ಭಾವಚಿತ್ರ ತಾ. 31ರ ಒಳಗೆ ತಮ್ಮ ವ್ಯಾಪ್ತಿಯ ಚಾ.ವಿ.ಸ.ನಿ.ನಿ ಉಪ ವಿಭಾಗ ಕಛೇರಿಗೆ ಭೇಟಿ ನೀಡಿ ಅರ್ಜಿ ನೊಂದಾಯಿಸಿಕೊಳ್ಳಬಹುದು ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.