ನಾಪೆÇೀಕ್ಲು, ಮಾ. 19 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಅಭಿವೃದ್ಧಿಗೆ ಭಕ್ತರು ನೀಡಿದ ಹಣದ ಒಟ್ಟು ಮೊತ್ತವನ್ನು ಬಹಿರಂಗ ಪಡಿಸುವಂತೆ ಜಿಲ್ಲಾ ಮಾನವ ಹಕ್ಕು ಆಯೋಗ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಆಗ್ರಹಿಸಿದ್ದಾರೆ.
ಭಕ್ತರು ನೀಡಿದ ಹಣದ ವಿವರವನ್ನು ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘವು ‘ಶಕ್ತಿ’ಯಲ್ಲಿ ಪ್ರಕಟಿಸುತ್ತಿದೆ, ಆದರೆ ಈವರೆಗೆ ಸಂಗ್ರಹವಾದ ಒಟ್ಟು ಹಣದ ಮೊತ್ತವನ್ನು ತಿಳಿಸಿಲ್ಲ. ಆದುದರಿಂದ ಭಕ್ತರು ನೀಡಿದ ಹಣದ ವಿವರದೊಂದಿಗೆ ಆ ದಿನದವರೆಗೆ ಸಂಗ್ರಹವಾದ ಒಟ್ಟು ಹಣದ ಮೊತ್ತವನ್ನು ತಿಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.