ಸೋಮವಾರಪೇಟೆ,ಮಾ.16: ಇಲ್ಲಿಗೆ ಸಮೀಪದ ಹಳ್ಳ ದಿಣ್ಣೆ ಗ್ರಾಮದ ಶ್ರೀ ಮುನೀಶ್ವರ ದೇವರ 35ನೇ ವಾರ್ಷಿಕ ಪೂಜೆ ತಾ. 18ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಎ. ಭಾಸ್ಕರ್ ತಿಳಿಸಿದ್ದಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ 8.30ಕ್ಕೆ ಸೊಪ್ಪಿನ ಬಸವಣ್ಣ ದೇವರ ಪೂಜೆಯೊಂದಿಗೆ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ ನೀಡಲಾಗುವದು. 11.30ಕ್ಕೆ ಮುನೀಶ್ವರ ದೇವರ ಪೂಜೆ ಪ್ರಾರಂಭಗೊಳ್ಳುವದು. ಇದರ ಅಂಗವಾಗಿ ತಾ.17ರ ಸಂಜೆ 5.30ಕ್ಕೆ ಗ್ರಾಮಸ್ಥರಿಗೆ ರಂಗೋಲಿ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9972717450 ಸಂಖ್ಯೆಯನ್ನು ಸಂಪರ್ಕಿಸಬಹುದು.