ಕುಶಾಲನಗರ, ಮಾ. 16: ಕುಶಾಲನಗರದ ಮಾರುಕಟ್ಟೆ ಬಳಿಯಿರುವ ಹಿಂದೂ ರುದ್ರಭೂಮಿಯಲ್ಲಿ ಅಭಿವೃದ್ಧಿಪಡಿಸಿದ ಸ್ಮಶಾನ ಮಂಟಪವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಲೋಕಾರ್ಪಣೆಗೊಳಿಸಿದರು.
ಮಂಟಪದ ಅಭಿವೃದ್ಧಿ ಕಾಮಗಾರಿಯನ್ನು ಸ್ಥಳೀಯ ದಾನಿಗಳಾದ ಉಮಾಶಂಕರ್ ಅವರು ನಡೆಸಿದ್ದು ಈ ಬಗ್ಗೆ ಶಾಸಕರು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಕುಶಾಲನಗರ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಆಂಜನೇಯ ದೇವಾಲಯ ಪ್ರಮುಖರಾದ ವಿ.ಡಿ.ಪುಂಡರೀಕಾಕ್ಷ, ಕೊಡವ ಸಮಾಜ ಅಧ್ಯಕ್ಷ ಮಂಡೇಂಡ ಬೋಸ್ ಮೊಣ್ಣಪ್ಪ, ದಾನಿಗಳು ಹಾಗೂ ಕಿರುತೆರೆ ಧಾರವಾಹಿ ನಿರ್ಮಾಪಕರಾದ ಉಮಾಶಂಕರ್, ಸ್ಥಳೀಯರಾದ ಕೆ.ಎನ್.ದೇವರಾಜ್, ಚೆಲುವರಾಜು ಮತ್ತಿತರರು ಇದ್ದರು.