ಕರಿಕೆ, ಮಾ. 16: ತೀವ್ರ ಹದಗೆಟ್ಟಿದ್ದ ಭಾಗಮಂಡಲ ಕರಿಕೆ ರಸ್ತೆ ಡಾಮರೀಕರಣಕ್ಕೆ ಇದೀಗ ಮರುಜೀವ ದೊರೆತಿದ್ದು, ‘ಶಕ್ತಿ’ ವರದಿಗೆ ಸ್ಪಂದನೆ ದೊರೆತಂತಾಗಿದೆ.

ತಾ. 9 ರಂದು ‘ಹದಗೆಟ್ಟ ಭಾಗಮಂಡಲ-ಕರಿಕೆ ರಸ್ತೆ ಜವಾಬ್ದಾರಿ ಮರೆತ ಜನಪ್ರತಿನಿಧಿಗಳು’ ಎಂಬ ತಲೆಬರಹದಡಿಯಲ್ಲಿ ವರದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಖುದ್ದು ಡಾಮರೀಕರಣ ಕಾಮಗಾರಿಯತ್ತ ಆಸಕ್ತಿ ವಹಿಸಿದ್ದು ಇದೀಗ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. - ಹೊದ್ದೆಟಿ ಸುಧೀರ್