ಪೊನ್ನಂಪೇಟೆ, ಮಾ. 16: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ಪೊನ್ನಪೇಟೆ ನಿಸರ್ಗ ಜೇಸೀಸ್) ಘಟಕದ 8ನೇ ಘಟಕಾಡಳಿತ ಮಂಡಳಿಯ ಪದಸ್ವೀಕಾರ ಸಮಾರಂಭ ಇತ್ತೀಚೆಗೆ ಗೋಣಿಕೊಪ್ಪಲಿನ ಪೂಜ ಆರ್ಕೆಡ್ ನಲ್ಲಿರುವ ಹೊಟೇಲ್ ಪ್ರಕಾಶ್ ಇಂಟರ್ನ್ಯಾಶನಲ್ ಸಭಾಂಗಣದಲ್ಲಿ ನಡೆಯಿತು. 2017ನೇ ಸಾಲಿನ ಘಟಕದ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಜೇಸೀಸ್ನ ವಲಯ 14ರ ಅಧ್ಯಕ್ಷ ಸಿ.ಜಿ. ದರ್ಶನ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದ ಭಾರತೀಯ ಜೇಸೀಸ್ನ ಪೂರ್ವ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕುಂದಾಪುರದ ಸದಾನಂದ ನಾವಡ ಮಾತನಾಡಿ, ಯುವಕರ ವ್ಯಕ್ತಿತ್ವ ರೂಪಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಜೇಸೀಸ್ ಯುವ ಸಮೂಹದ ಪಾಲಿಗೆ ಮಹಾ ವಿಶ್ವವಿದ್ಯಾಲಯವಿದ್ದಂತೆ. ಜೇಸೀಸ್ನ ಬಗ್ಗೆ ಪೂರ್ಣ ಅರಿವಾಗಬೇಕಾದರೆ ಅದನ್ನು ಒಳ ಪ್ರವೇಶಿಯೇ ಆಸ್ವಾದಿಸಬೇಕು ಎಂದು ಬಣ್ಣಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಜೇಸಿ ಸಂಸ್ಥೆ ಯುವ ಜನತೆಗೆ ಉತ್ತಮ ವೇದಿಕೆಯನ್ನು ಒದಗಿಸಿ ಕೊಡುತ್ತಿದೆ. ಅದರ ಸದುಪ ಯೋಗವನ್ನು ಪಡಿದುಕೊಳ್ಳುವಂತೆ ಕಿವಿಮಾತು ಹೇಳಿದರು. ಸದಸ್ಯ ಅಬ್ದುಲ್ ಮುನೀರ್ ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಬಿ.ಈ. ಕಿರಣ್ ಕಾರ್ಯಕ್ರಮದಲ್ಲಿ ಮಾತನಾಡಿದರು. 2018 ಸಾಲಿನ ನೂತನ ಅಧ್ಯಕ್ಷ ವಿಕ್ರಂ ಮೂಡಗದ್ದೆ ಅವರಿಗೆ ನಿರ್ಗಮಿತ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ನೂತನ ಅಧ್ಯಕ್ಷರು 2018 ನೇ ಸಾಲಿನ ಘಟಕಾಡಳಿತ ಮಂಡಳಿ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸಮಾರಂಭದಲ್ಲಿ ಕಾರ್ಯದರ್ಶಿ ಯಾಗಿ ವಿನೋದ್ ಎಂ.ಎನ್., ಖಜಾಂಚಿಯಾಗಿ ಸತೀಶ್ ಹೆಚ್.ಆರ್., ಉಪಾಧ್ಯಕ್ಷರಾಗಿ ಶೀಲಾ ಬೋಪಣ್ಣ (ಘಟಕಾಡಳಿತ), ಎ.ಪಿ. ದಿನೇಶ್ ಕುಮಾರ್ (ತರಬೇತಿ), ಎಂ.ಪಿ. ವನಿತ್ ಕುಮಾರ್ (ಕಾರ್ಯಕ್ರಮ), ಕೆ.ಎಸ್. ದಿಲನ್ ಬೋಪಣ್ಣ (ಅಭಿವೃದ್ಧಿ ಮತ್ತು ಬೆಳವಣಿಗೆ), ಸಹ ಕಾರ್ಯದರ್ಶಿಯಾಗಿ ಪ್ರೀತಂ ಮತ್ತು ನಿರ್ದೇಶಕರುಗಳಾಗಿ ಎಂ.ಎಸ್. ಶರ್ಪುದ್ದೀನ್, ಎನ್.ಜಿ. ಸುರೇಶ್, ಸ್ವಾಮಿ, ಎಂ. ನೀತ್ ಅಯ್ಯಪ್ಪ ಮತ್ತು ಎನ್.ಸಿ. ಧನಂಜಯ, ಘಟಕದ ಮಹಿಳಾ ಸದಸ್ಯರ ವಿಭಾಗವಾಗಿರುವ ಜೇಸಿರೆಟ್ ಮುಖ್ಯಸ್ಥರಾಗಿ ಕಲ್ಪನಾ ಮೂಡಗದ್ದೆ, ಮಕ್ಕಳ ವಿಭಾಗವಾಗಿರುವ ಜೂನಿಯರ್ ಜೇಸೇ ಮುಖ್ಯಸ್ಥರಾಗಿ ಗೌರವ್ ರಾಮದಾಸ್ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧ ಜೇಸೀ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಬೇರೆ ಸಂಘ-ಸಂಸ್ಥೆಗಳ ಪ್ರಮುಖರು, ಜೇಸೀ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಎಂ.ಎನ್. ವಿನೋದ್ ವಂದಿಸಿದರು.