ಕುಶಾಲನಗರ, ಮಾ. 16: ಆಧುನಿಕ ಯುಗದಲ್ಲಿ ಧಾರ್ಮಿಕ ಪ್ರಜ್ಞೆಯ ಕೊರತೆಯಿಂದಾಗಿ ಸಮಾಜದಲ್ಲಿ ಯುವ ಪೀಳಿಗೆ ಹಾದಿ ತಪ್ಪುವ ಸಾಧ್ಯತೆಗಳು ಅಧಿಕವಾಗಿದೆ ಎಂದು ಅಂತರ್ರಾಷ್ಟ್ರೀಯ ಪ್ರಭಾಷಕ ನೌಷಾದ್ ಬಾಖವಿ ಆತಂಕ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದ ಜಾತ್ರಾ ಮೈದಾನದ ಶಂಶುಲ್ ಉಲಮ ವೇದಿಕೆಯಲ್ಲಿ ಎಸ್ವೈಎಸ್ ಮತ್ತು ಎಸ್ಕೆಎಸ್ಎಸ್ಎಫ್ ಸಂಘಟನೆಗಳ ಆಶ್ರಯದಲ್ಲಿ ನಡೆದ ಏಕದಿನ ಮತ ಪ್ರಭಾಷಣ ಮತ್ತು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಸಮಾವೇಶದಲ್ಲಿ ಉಪನ್ಯಾಸ ನೀಡಿ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನವಾಗಿರುವ ಇಂದಿನ ಯುವ ಪೀಳಿಗೆಗೆ ಧಾರ್ಮಿಕ ವಿದ್ಯಾಭ್ಯಾಸದ ಅವಶ್ಯಕತೆಯಿದೆ. ಸಂಸ್ಕøತಿಗಳು, ಆಚಾರ ವಿಚಾರಗಳು ನಾಶಗೊಳ್ಳುವದರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ ಬಾಂಧವ್ಯಗಳ ಕಂದಕ ಸೃಷ್ಟಿಯಾಗುತ್ತಿರುವದು ವಿಷಾದನೀಯ ಎಂದರು.
ಕಾರ್ಯಕ್ರಮವನ್ನು ಪ್ರಮುಖ ಅಸ್ಸೈಯದ್ ಅಲಿ ಕುಂಬೊಳ್ ತಂಞಳ್ ಉದ್ಘಾಟಿಸಿದರು. ಕೊಡಗು ಜಿಲ್ಲಾ ಸಹಾಯಕ ಖಾಜಿó ಎಂ.ಎಂ ಅಬ್ದುಲ್ ಫೈಜಿó ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸಮಾಜದ ಅಧ್ಯಕ್ಷರಾದ ಕೆ.ಎಂ. ಇಬ್ರಾಹಿಂ ಮಾಸ್ತರ್, ಯಾಕೂಬ್, ಬಿ.ಹೆಚ್ ಅಹ್ಮದ್, ಎಂ.ವೈ ಇಸ್ಮಾಯಿಲ್, ಎಂ.ಇ ಮೊಹಿದ್ದೀನ್ ಮತ್ತಿತರ ಧಾರ್ಮಿಕ ಮುಖಂಡರು ಮತ್ತು ಸಮುದಾಯದ ಪ್ರಮುಖರು ಇದ್ದರು.
ಎಸ್ಕೆಎಸ್ಎಸ್ಎಫ್ ರಾಜ್ಯ ಉಪಾಧ್ಯಕ್ಷ ಎಂ.ವೈ.ಅಶ್ರಫ್ ಫೈಜಿ ಸ್ವಾಗತಿಸಿದರು, ನಾಸಿರ್ ಧಾರಿಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ನೆರೆ ಭಾಗದ ಸುಮಾರು 8 ಸಾವಿರ ಮಂದಿ ಪಾಲ್ಗೊಂಡಿದ್ದರು.