ಸುಂಟಿಕೊಪ್ಪ, ಮಾ. 16: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಹೋರೂರು ಗ್ರಾಮದಲ್ಲಿ ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆ ವತಿಯಿಂದ ಪಲ್ಸ್ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವದರ ಮೂಲಕ ಪೋಲಿಯೊ ಮುಕ್ತ ಭಾರತವನ್ನಾಗಿ ಮಾಡಲು ಪ್ರತಿಜ್ಞೆ ಮಾಡಲಾಯಿತು.
ಈ ಸಂದರ್ಭ ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್, ಖಜಾಂಚಿ ನಿರಂಜನ್, ಪೂರ್ವ ವಲಯ ಅಧ್ಯಕ್ಷ ದೇವಿಪ್ರಸಾದ್, ಪೂರ್ವ ಅಧ್ಯಕ್ಷ ವೆಂಕಪ್ಪ ಕೊಟ್ಯಾನ್, ಮನು ಅಚ್ಚಮಯ್ಯ ಕೆದಕಲ್ ಅಂಗನವಾಡಿ ಸಹಾಯಕಿಯರಾದ ಮಂಜುಳ, ನಳಿನಿ, ಆಶಾ ಕಾರ್ಯಕರ್ತೆರಾದ ನಿರ್ಮಲ, ಲತಾ ರಾಜಕುಮಾರ್, ಆರೋಗ್ಯ ಸಹಾಯಕಿ ಶೇಷಮ್ಮ ಇತರರು ಇದ್ದರು.