ಗೋಣಿಕೊಪ್ಪಲು, ಮಾ. 15: ಹಾತೂರು ವನಭದ್ರಕಾಳಿ ದೇವಾಲಯದ ಸುತ್ತಲ್ಲಿನ 16 ಎಕರೆ ದೇವರಕಾಡು ಅರಣ್ಯ ಪ್ರದೇಶ ರಕ್ಷಣೆ ಮಾಡುವ ನಿಟ್ಟಿನಲ್ಲಿ ತಂತಿ ಬೇಲಿ ಅಳವಡಿಕೆಗೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವಿನು ವಿಶ್ವನಾಥ್, ಕಾರ್ಯದರ್ಶಿ ಸಾಬು ಮಾದಪ್ಪ, ತಕ್ಕ ಮುಖ್ಯಸ್ಥರಾದ ಕೊಂಗೆಪಂಡ ವಾಸು ಉತ್ತಪ್ಪ, ಪಟ್ಟು ಪ್ರಕಾಶ್, ಪುಲಿಯಂಡ ದಿನೇಶ್, ಗ್ರಾ.ಪಂ. ಸದಸ್ಯೆ ರೂಪ ಭೀಮಯ್ಯ, ಸ್ಥಳೀಯರಾದ ಸುಜಾ ನಾಣಯ್ಯ, ಅಪ್ಪನೆರವಂಡ ವಾಸು ಉತ್ತಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.